ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೆನಿಸ್ ಬಾಲ್‌ನಲ್ಲಿ ಆಡಿದರೆ ಕ್ರಿಕೆಟಿಗನಲ್ಲ: ಹೈ.ಕೋ
"ರಾಷ್ಟ್ರ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಆಡಿರುವ ತನಗೆ ಕ್ರೀಡಾಳುವಿನ ಅನುಕೂಲತೆಗಳನ್ನು ಒದಗಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ತಳ್ಳಿಹಾಕಿದೆ.

"ಟೆನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡಿದರೆ ಅದು ಕ್ರಿಕೆಟ್ ಅಲ್ಲ, ಮತ್ತು ಟೆನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡಿದಲ್ಲಿ ಅದು ನಿಮ್ಮನ್ನು ಕ್ರಿಡಾಪಟುವಾಗಿಸುವುದಿಲ್ಲ. ಹಾಗಾಗಿ ಟೆನಿಸ್ ಬಾಲ್ ಕ್ರಿಕೆಟ್ ಆಡಿರುವುದು ನಿಮಗ್ಯಾವ ಉದ್ಯೋಗವನ್ನು ಒದಗಿಸದು" ಎಂದು ಹೈಕೋರ್ಟ್ ನ್ಯಾಯಾಧೀಶ ಭಗವತಿ ಪ್ರಸಾದ್ ಹೇಳಿದ್ದಾರೆ.

ಜಿಂಗೇಶ್ ಪಟೇಲ್ ಎಂಬವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ವೇಳೆಗೆ ಕಳೆದ ವಾರ ನ್ಯಾಯಾಲಯದ ಈ ತೀರ್ಪು ಹೊರಬಿದ್ದಿದೆ. ತಾನು ಕ್ರಿಕೆಟ್ ಬಾಲ್ ಟೆನಿಸ್ ಆಡಿದ ಕಾರಣ, ಕ್ರೀಡಾಪಟುಗಳಿಗೆ ನೀಡುವ ಹೆಚ್ಚುವರಿ ಐದು ಶೇಕಡಾ ಅಂಕಗಳಿಗೆ ತಾನು ಅರ್ಹಎಂದು ಅವರು ಅವರು ಕಳೆದವರ್ಷ ದೈಹಿಕ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ವೇಳೆ ಮನವಿಮಾಡಿದ್ದರು.

ಪಟೇಲ್ ಅರ್ಜಿ ಸಲ್ಲಿಸಿದ್ದ ಬಾಣಸ್ಕಾಂತ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಅಭ್ಯರ್ಥಿಯು ಕ್ರಿಕೆಟಿಗನಲ್ಲ ಎಂದು ನಿರಾಕರಿಸಿದ್ದರ ವಿರುದ್ಧ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಮತ್ತಷ್ಟು
ಬಜೆಟ್ ಅಧಿವೇಶನ ಅಂತ್ಯ: ಸಂಸತ್ ಅನಿರ್ದಿಷ್ಟಾವಧಿ ಮುಂದೂಡಿಕೆ
ರಾಹುಲ್ ಸುತ್ತ ಭಟ್ಟಂಗಿಪಡೆ: ಸಂಸದ ರಾಜೀನಾಮೆ
ರಾಜ್ಯಸಭೆಯಲ್ಲಿ ಮಹಿಳಾ ಮಸೂದೆ ಮಂಡನೆ
ಮಧುರೈ: ನಾಚಿಕೆಗೇಡಿನ ಗೋಡೆಯ ಅವಸಾನ
ಎಡಪಕ್ಷಗಳ ಯಾವುದೇ ವಿಚಾರ ಚರ್ಚಿಸಲು ಸಿದ್ಧ: ಪ್ರಧಾನಿ
ಲೈಂಗಿಕ ಹಗರಣದಲ್ಲಿ ಜೆಕೆ ಸ್ಪೀಕರ್: ಕಾಂಗ್ರೆಸ್ ಎಂಪಿ ಆರೋಪ