ಬಾಲಸೊರ್: ಒರಿಸ್ಸಾ ಕರಾವಳಿಯ ವೀಲರ್ಸ್ ದ್ವೀಪದಿಂದ ಭಾರತವು ಬುಧವಾರ 3,000 ಕಿ.ಮೀ ದೂರ ಜಿಗಿಯಬಲ್ಲ ಅಣುಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಅಗ್ನಿ-3ರ ಪರೀಕ್ಷಾ ಉಡಾವಣೆ ಮಾಡಿದೆ.
ಮುಂಜಾನೆ ಸುಮಾರು 9.56ರ ವೇಳೆಗೆ ಸಮಗ್ರ ಪರೀಕ್ಷಾ ವಲಯದ ಉಡಾವಣಾ ಸಂಕೀರ್ಣ(ಎಲ್‌ಸಿ-4) ದಿಂದ ಮೊಬೈಲ್ ಉಡ್ಡಯಕದ ಮೂಲಕ ಕ್ಷಿಪಣಿಯನ್ನು ಹಾರಿಬಿಡಲಾಯಿತು.
ಕ್ಷಿಪಣಿಯು 16 ಮೀಟರ್ ಉದ್ದ ಹಾಗೂ 1.8 ಮೀಟರ್ ವ್ಯಾಸದ ಕ್ಷಿಪಣಿಯು ಆಕಾಶಮುಖಿಯಾಗಿ ದಟ್ಟವಾದ ಕಿತ್ತಳೆ ಮತ್ತು ಬಿಳಿ ಬಣ್ಣದ ಹೊಗೆ ಕಾರುತ್ತಾ ಹಾಗಿದ್ದು ಸೆಕುಂಡುಗಳೊಳಗಾಗಿ ಬರಿಯ ಕಣ್ಣುಗಳಿಗೆ ಅದೃಶ್ಯವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ನುಡಿದರು.
ಅಗ್ನಿ- 3 ಕ್ಷಿಪಣಿಯಲ್ಲಿ ಮಾರ್ಗದರ್ಶಿ ವ್ಯವಸ್ಥೆಗಾಗಿ ಕಂಪ್ಯೂಟರನ್ನು ಅಳವಡಿಸಲಾಗಿದೆ. ಪ್ರತಿಷ್ಠಿತ ರಾಡಾರ್‌ಗಳ ಬ್ಯಾಟರಿ, ವಿದ್ಯುನ್ಮಾನ ದೃಷ್ಟಿಯ ಟ್ರಾಕಿಂಗ್ ವ್ಯವಸ್ಥೆಗಳು, ಹಾಗೂ ಎರಡು ಯುದ್ಧ ನೌಕೆಗಳನ್ನು ಈ ಪರೀಕ್ಷಾ ಹಾರಾಟದ ಸಂಪೂರ್ಣ ವೀಕ್ಷಣೆಗಾಗಿ ವ್ಯವಸ್ಥೆಗೊಳಿಸಲಾಗಿದೆ.
ಸುಮಾರು 48 ಟನ್ ತೂಕದ ಕ್ಷಿಪಣಿಯನ್ನು ಪ್ರಥಮವಾಗಿ 2006ರ ಜುಲೈ 9ರಂದು ಹಾರಿ ಬಿಡಲಾಗಿತ್ತಾದರೂ, ಅದು ವಿಫಲವಾಗಿತ್ತು.
|