ಇಂಧನವನ್ನು ಉಳಿಸುವಂತಹ ಮತ್ತು ಸೃಷ್ಟಿಸುವಂತಹ ಉಪಕರಣಗಳನ್ನು ಕೆಟಿಎಚ್ಎಂ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ತಯ್ಯಾರಿಸಿದ್ದಾರೆ.
ನಾಸಿಕ್ ಜಿಲ್ಲೆಯ ಮರಾಠ ವಿದ್ಯಾ ಪ್ರಸಾರಕ್ ಸಮಾಜವು ನಡೆಸುವ ಕೆಟಿಎಚ್ಎಂ ಕಾಲೇಜಿನ ವಿದ್ಯಾರ್ಥಿಗಳು ನವೀಕರಿಸಬಲ್ಲಂತಹ ಗ್ರಾಮೋದ್ಯಮಗಳನ್ನು ಸ್ಥಾಪಿಸಲು ಮತ್ತು ಗ್ರಾಮೀಣ ಭಾರತದಲ್ಲಿ ಸ್ವ-ಉದ್ಯೋಗಕ್ಕೆ ಅವಕಾಶ ನೀಡುವಂತಹ ನಾಲ್ಕು ಉಪಕರಣಗಳನ್ನು ತಯಾರಿಸಿದ್ದಾರೆ. ಈ ಉತ್ಪನ್ನಗಳನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.
ಇಂಧನ ನವೀಕರಿಸಹಬಲ್ಲಂತಹ ವ್ಯವಸ್ಥೆಯ ಉಪಕರಣ, ಕೃಷಿ ಹಾಗೂ ಆಹಾರ ಸಂಸ್ಕರಣಾ ಡ್ರಯರ್, ಹ್ಯೂಮನ್ ಹೋಮ್ ಜನರೇಟರ್ ಮತ್ತು ಕಾಯಿನ್ ಫೋನ್ ಮತ್ತು ಬೆಳಕು ವ್ಯವಸ್ಥೆಯ ಉಪಕರಣಗಳನ್ನು ಈ ವಿದ್ಯಾರ್ಥಿಗಳು ಅಭಿವೃದ್ಧಿಗೊಳಿಸಿದ್ದಾರೆ.
ಈ ಎಲ್ಲ ಉಪಕರಣಗಳನ್ನು ಸೌರ ಹಾಗೂ ಬ್ಯಾಟರಿ ಶಕ್ತಿಯಿಂದ ಚಲಾಯಿಸಬಹುದಾಗಿದೆ. ಹಾಗಾಗಿ ಸೌರಶಕ್ತಿಯ ಮೂಲಕ ಉಪಕರಣಗಳನ್ನು ಚಲಾಯಿಸಬಹುದಾಗಿದ್ದು, ಈ ವೇಳೆ ಉತ್ಪನ್ನಗೊಂಡ ಇಂಧನವನ್ನು ಬ್ಯಾಟರಿಯಲ್ಲಿ ಉಳಿಸಿಕೊಂಡು ಮರು ಬಳಕೆ ಮಾಡಬಹುದಾಗಿದೆ. ಈ ಎಲ್ಲ ಉತ್ಪನ್ನಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವ-ಉದ್ಯೋಗ ಸಾಮರ್ಥ್ಯ ಹೊಂದಿದೆ.
|