ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಐಎಂ-ಎಯಿಂದ ಶುಲ್ಕ ಏರಿಕೆ ಸಮರ್ಥನೆ
ಅಹ್ಮದಾಬಾದ್‌ನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಶುಲ್ಕಹೆಚ್ಚಿಸಿರುವುದಕ್ಕೆ ವ್ಯಕ್ತವಾಗಿರುವ ಟೀಕೆಗಳಿಗೆ ಮಾರುತ್ತರ ನೀಡಿರುವ ಸಂಸ್ಥೆಯು, ತಾನು ನೀಡುವ ಶಿಕ್ಷಣವು ಆರ್ಥಿಕವಾಗಿ ಕೈಗೆಟಕುವಂತಹದ್ದು ಎಂಬ ಮಾರುತ್ತರ ನೀಡಿದೆ.

ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ಲೇಸ್‌ಮೆಂಟ್‌‍‌ಗೆ ಕಂಪೆನಿಗಳು ಆಹ್ವಾನಿಸುವ ಸರಾಸರಿ ಪ್ಯಾಕೇಜ್ ಆಧಾರದ ಮೇಲೆ ಹೇಳುವುದಾದರೆ, ವಿದ್ಯಾರ್ಥಿಗಳು ಪಾವತಿ ಮಾಡುವ 5.5ಲಕ್ಷ ಶುಲ್ಕದ ಹಣವು ನಾಲ್ಕುತಿಂಗಳ ಸಂಬಳದಲ್ಲೇ ಗಳಿಸಬಹುದಾಗಿದೆ ಐಐಎಂ ತನ್ನ ಇತ್ತೀಚಿನ ಪ್ರಕಟಣೆಯಲ್ಲಿ ಸಮರ್ಥಿಸಿಕೊಂಡಿದೆ.

ಸಂಸ್ಥೆಯ ಶುಲ್ಕ ಹೆಚ್ಚಳ ಕ್ರಮವನ್ನು ಸಂಸದೀಯ ಸಮಿತಿಯೊಂದು ಆಕ್ಷೇಪಿಸಿ, ಐಐಎಂಗಳು ಭಾರ್ಗವ ಸಮಿತಿಯ ವರದಿಗಾಗಿ ಕಾಯಬೇಕೆಂದು ಸಲಹೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ತನ್ನ ಶುಲ್ಕಹೆಚ್ಚಳದ ಕ್ರಮವನ್ನು ಐಐಎಂ-ಎ ಸಮರ್ಥಿಸಿಕೊಂಡಿದೆ.

ಆದಾಗ್ಯೂ, ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗದಂತೆ, ಯಾವುದೇ ವೆಚ್ಚವಿಲ್ಲದಂತೆ ಬಡವಿದ್ಯಾರ್ಥಿಗಳಿಗೆ ಎಂಬಿಎ ಶಿಕ್ಷಣ ನೀಡುವ ವಿಶ್ವದಲ್ಲೇ ಪ್ರಥಮ ಸಂಸ್ಥೆಯಾಗಿ ಐಐಎಂ-ಎ ಹೊರಹೊಮ್ಮಲಿದೆ ಎಂದು ಅದು ಹೇಳಿದೆ.
ಮತ್ತಷ್ಟು
ವಿದ್ಯಾರ್ಥಿಗಳಿಂದ ಇಂಧನ ಮರುಬಳಕೆ ಉಪಕರಣ
ಅಗ್ನಿ-3 ಕ್ಷಿಪಣಿ ಪರೀಕ್ಷಾ ಉಡಾವಣೆ
ಮಹಿಳಾ ಮೀಸಲಾತಿಗೆ ಎಸ್ಪಿ, ಆರ್‌ಜೆಡಿ ವಿರೋಧ
ಟೆನಿಸ್ ಬಾಲ್‌ನಲ್ಲಿ ಆಡಿದರೆ ಕ್ರಿಕೆಟಿಗನಲ್ಲ: ಹೈ.ಕೋ
ಬಜೆಟ್ ಅಧಿವೇಶನ ಅಂತ್ಯ: ಸಂಸತ್ ಅನಿರ್ದಿಷ್ಟಾವಧಿ ಮುಂದೂಡಿಕೆ
ರಾಹುಲ್ ಸುತ್ತ ಭಟ್ಟಂಗಿಪಡೆ: ಸಂಸದ ರಾಜೀನಾಮೆ