10 ದಿನ ಮುಂಚಿತವಾಗಿಯೇ ಈ ಬಾರಿ ಕೇರಳ ತೀರಕ್ಕೆ ಆಗಮಿಸಲಿರುವ ಮುಂಗಾರು ಮಾರುತದಿಂದ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1ರಂದು ಮಾನ್ಸೂನ್ ಕೇರಳಕ್ಕೆ ಅಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದ್ದರೂ, ಅದು ಮೇ 20 ಮತ್ತು 25ರ ನಡುವೆಯೇ ಆಗಮಿಸುವ ನಿರೀಕ್ಷೆ ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಮಾನ್ಸೂನ್ ಸಾಮಾನ್ಯವಾಗಿರುತ್ತದೆ ಎಂದು ಕಳೆದ ತಿಂಗಳು ಇಲಾಖೆ ಹೇಳಿತ್ತು.
ಇದೇ ವೇಳೆ, ಬಿಹಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಬಾರಿ ಬಂಪರ್ ಬೆಳೆಯಾಗಲಿದೆ ಎಂದು ನಾಸಾ ತಿಳಿಸಿದೆ. ಆಹಾರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದೊಂದು ಒಳ್ಳೆಯ ಸುದ್ದಿ.
|