ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವದ ಕೊರತೆ: ಅರ್ಜುನ್ ಸಿಂಗ್
ರಾಹುಲ್ ಗಾಂಧಿ ಸುತ್ತ ಭಟ್ಟಂಗಿಗಳ ಪಡೆ ತುಂಬಿರುತ್ತದೆ ಎಂಬ ಕಾರಣ ನೀಡಿ ಹಿರಿಯ ಕಾಂಗ್ರೆಸ್ ಸಂಸದ ಅಖಿಲೇಶ್ ದಾಸ್ ಅವರು ತನ್ನ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಎರಡು ದಿನಗಳ ಬಳಿಕ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಪುಸ್ತಕವೊಂದರಲ್ಲಿ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವದ ಕೊರತೆ ಇದೆ ಎಂದು ಹೇಳಿದ್ದು, ನಿರ್ಣಯ ಕೈಗೊಳ್ಳುವ ಶೈಲಿಯನ್ನು ಪ್ರಶ್ನಿಸಿದ್ದಾರೆ.

ಮೂಹೆ ಕಹಾನ್ ವಿಶ್ರಾಮ್(ವಿಶ್ರಾಂತಿಗೆ ಸಮಯವಿಲ್ಲ) ಎಂಬ ಪುಸ್ತಕದಲ್ಲಿ ಪಕ್ಷದಲ್ಲಿ ನಿರ್ಣಯ ಕೈಗೊಳ್ಳುವಿಕೆ ಪ್ರಕ್ರಿಯೆಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಹಿಂದೆಲ್ಲ ಈ ಪ್ರಕ್ರಿಯೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಸಾಕಷ್ಟು ಸಂದರ್ಭಗಳಿರುತ್ತಿದ್ದವು, ಆದರೆ ಈಗ ಜನತೆ ತಾವು ಆ ಪ್ರಕ್ರಿಯೆಯ ಅಂಗವೆಂದು ಭಾವಿಸುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.

"ಅರ್ಜುನ್ ಸಿಂಗ್ ಅವರು ಹಿಂದಿ ಬಳಕೆಯಲ್ಲಿ ಅಷ್ಟೊಂದು ಸುಲಲಿತವಾಗಿದ್ದಂತೆ ಕಾಣುತ್ತಿರಲಿಲ್ಲ. ಅವರು ಯಾವುದೇ ವಿಚಾರದ ಕುರಿತು ವಿಷಾದ ವ್ಯಕ್ತಪಡಿಸಿಲ್ಲ" ಎಂದು ಪುಸ್ತಕದ ಲೇಖಕ ಕನಹಿಯ ಲಾಲ್ ನಂದನ್ ಹೇಳಿದ್ದಾರೆ.

ಅರ್ಜುನ್ ಸಿಂಗ್ ಅವರ ರಾಜಕೀಯ ಜೀವನದ 51 ವರ್ಷದ ಸಂದರ್ಭದಲ್ಲಿ ಹೊರತರಲಾಗಿರುವ ಈ ಪುಸ್ತಕವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಶುಕ್ರವಾರ ಬಿಡುಗಡೆ ಮಾಡಲಿದ್ದಾರೆ. ಅರ್ಜುನ್ ಸಿಂಗ್ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ.
ಮತ್ತಷ್ಟು
ಮೇ 20-25ರೊಳಗೆ ಆಗಮಿಸಲಿದ್ದಾನೆ ಮಳೆರಾಯ
ಐಐಎಂ-ಎಯಿಂದ ಶುಲ್ಕ ಏರಿಕೆ ಸಮರ್ಥನೆ
ವಿದ್ಯಾರ್ಥಿಗಳಿಂದ ಇಂಧನ ಮರುಬಳಕೆ ಉಪಕರಣ
ಅಗ್ನಿ-3 ಕ್ಷಿಪಣಿ ಪರೀಕ್ಷಾ ಉಡಾವಣೆ
ಮಹಿಳಾ ಮೀಸಲಾತಿಗೆ ಎಸ್ಪಿ, ಆರ್‌ಜೆಡಿ ವಿರೋಧ
ಟೆನಿಸ್ ಬಾಲ್‌ನಲ್ಲಿ ಆಡಿದರೆ ಕ್ರಿಕೆಟಿಗನಲ್ಲ: ಹೈ.ಕೋ