ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮದಾಸ್‌ಗೆ ಮುಖಭಂಗ: ವೇಣುಗೋಪಾಲ್‌ಗೆ ಜಯ
PTI
ಖ್ಯಾತ ಹೃದ್ರೋಗ ತಜ್ಞ, ಎಐಐಎಂಎಸ್‌ (ಏಮ್ಸ್)ನ ಮಾಜಿ ನಿರ್ದೇಶಕ ಪಿ. ವೇಣುಗೋಪಾಲ್ ಅವರ ನಿವೃತ್ತಿಗೆ ಅನುಕೂಲವಾಗುವಂತೆ ರೂಪಿಸಲಾಗಿದ್ದ ಕಾನೂನನ್ನು ಸುಪ್ರೀಂಕೋರ್ಟ್ ತಳ್ಳಿಹಾಕುವ ಮೂಲಕ ಕೇಂದ್ರ ಸರಕಾರಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.

ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಹಾಗೂ ವೇಣುಗೋಪಾಲ್ ಅವರ ನಡುವಿನ ಜಟಾಪಟಿಯ ಬಳಿಕ ಕೇಂದ್ರ ಸರಕಾರ ಈ ಕಾನೂನನ್ನು ಜಾರಿಗೆ ತಂದಿದ್ದು, ಏಮ್ಸ್ ನಿರ್ದೇಶಕರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ನಿಗದಿ ಮಾಡಿತ್ತು. ಈ ಕಾಯ್ದೆಯನ್ನು ಅನೂರ್ಜಿತಗೊಳಿಸಿರುವ ನ್ಯಾಯಾಲಯ, ವೇಣುಗೋಪಾಲನ್ ಅವರನ್ನು ತಕ್ಷಣ ಸಂಸ್ಥೆಯ ನಿರ್ದೇಶಕರಾಗಿಸಬೇಕು ಎಂದು ಹೇಳಿದೆ.

ತಮ್ಮನ್ನು ಪದಚ್ಯುತ ಗೊಳಿಸುವ ದರ್ಭಾವನೆ ಹಾಗೂ ಪಕ್ಷಪಾತಿತನದ ಉದ್ದೇಶಕ್ಕಾಗಿ ಈ ಕಾನೂನನ್ನು ಜಾರಿಗೆ ತಂದಿರುವುದಾಗಿ ದೂರಿ ವೇಣುಗೋಪಾಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಹಾಗೂ ಎಚ್.ಎಸ್.ಬೇಡಿ ಅವರನ್ನೊಳಗೊಂಡ ನ್ಯಾಯಪೀಠವು, ವೇಣುಗೋಪಾಲನ್ ಅವರ ವಾದವನ್ನು ಎತ್ತಿಹಿಡಿದಿದೆ.

ಮಾಜಿ ಕಾನೂನು ಸಚಿವ ಹಾಗೂ ಹಿರಿಯ ನ್ಯಾಯವಾದಿ ಅರುಣ್ ಜೈಟ್ಲಿ ಅವರು ವೇಣುಗೋಪಾಲ್ ಪರವಾಗಿ ವಾದಿಸಿದರು. ಆರೋಗ್ಯ ಸಚಿವ ರಾಮ್‌ದಾಸ್ ಅವರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಅವರನ್ನು ಪದಚ್ಯುತಗೊಳಿಸಬೇಕು ಎಂಬ ಏಕೈಕ ಉದ್ದೇಶದಿಂದ ಈ ಕಾನೂನನ್ನು ಜಾರಿಗೆ ತರಲಾಗಿದೆ ಎಂದೂ ಅವರು ನ್ಯಾಯಪೀಠದ ಮುಂದೆ ವಾದಿಸಿದರು.

ವೇಣುಗೋಪಾಲ್ ಹುದ್ದೆಯಲ್ಲಿ ಮುಂದುವರಿಯುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ, ಕೇಂದ್ರ ಸರಕಾರವು ಸಂಸತ್ತಿನಲ್ಲಿ ಈ ಕಾನೂನನ್ನು ಅಂಗೀಕರಿಸಿ ಅವರು ಹುದ್ದೆತೊರೆಯುವಂತೆ ಮಾಡಿತ್ತು.
ಮತ್ತಷ್ಟು
ಪಂಚಾಯತ್ ಚುನಾವಣೆ: ನಂದಿಗ್ರಾಮ ಪ್ರಕ್ಷುಬ್ಧ
ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವದ ಕೊರತೆ: ಅರ್ಜುನ್ ಸಿಂಗ್
ಮೇ 20-25ರೊಳಗೆ ಆಗಮಿಸಲಿದ್ದಾನೆ ಮಳೆರಾಯ
ಐಐಎಂ-ಎಯಿಂದ ಶುಲ್ಕ ಏರಿಕೆ ಸಮರ್ಥನೆ
ವಿದ್ಯಾರ್ಥಿಗಳಿಂದ ಇಂಧನ ಮರುಬಳಕೆ ಉಪಕರಣ
ಅಗ್ನಿ-3 ಕ್ಷಿಪಣಿ ಪರೀಕ್ಷಾ ಉಡಾವಣೆ