ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮದಾಸ್ ವಜಾಕ್ಕೆ ಬಿಜೆಪಿ ಒತ್ತಾಯ; ನಕಾರ
ಎಐಐಎಂಎಸ್ ನಿರ್ದೇಶಕರ ನಿವೃತ್ತಿ ವಯಸ್ಸನ್ನು ಕಡಿಮೆಗೊಳಿಸಿ ಕೇಂದ್ರ ಸರಕಾರವು ಜಾರಿಗೆ ತಂದಿರುವ ಕಾನೂನನ್ನು ಗುರುವಾರ ಸುಪ್ರೀಂ ಕೋರ್ಟ್ ತಳ್ಳಿಹಾಕಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್‌ರನ್ನು ವಜಾ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಎಐಐಎಂಎಸ್ ನಿರ್ದೇಶಕ ಡಾ|ವೇಣುಗೋಪಾಲ್ ಹಾಗೂ ಆರೋಗ್ಯ ಸಚಿವ ರಾಮ್‌ದಾಸ್ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಈ ಕಾನೂನು ಜಾರಿಗೆ ತರಲಾಗಿದ್ದು, ಇದರ ವಿರುದ್ಧ ವೇಣುಗೋಪಾಲ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಇದೀಗ ವೇಣುಗೋಪಾಲ್ ಅವರಿಗೆ ನ್ಯಾಯಾಲಯದಲ್ಲಿ ಜಯಲಭಿಸಿರುವ ಹಿನ್ನೆಲೆಯಲ್ಲಿ, ರಾಮ್‌ದಾಸ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿರುವ ಬಿಜೆಪಿ, ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧವೂ ಹರಿಹಾಯ್ದಿದ್ದು, ಈ ಪ್ರಮುಖ ಸಂಸ್ಥೆಯ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಕಾಪಾಡುವಲ್ಲಿ ವಿಫಲಾಗಿದ್ದಾರೆ ಎಂದು ಟೀಕಿಸಿದೆ.
ರಾಮ್‌ದಾಸ್ ರಾಜೀನಾಮೆ ಸಲ್ಲಿಸಬೇಕು, ಅವರು ರಾಜೀನಾಮೆ ಸಲ್ಲಿಸದಿದ್ದಲ್ಲಿ, ಪ್ರಧಾನಿ ಅವರನ್ನು ವಜಾಮಾಡಬೇಕು ಎಂದು ಬಿಜೆಪಿ ನಾಯಕಿ ಸುಶ್ಮಾಸ್ವರಾಜ್ ಒತ್ತಾಯಿಸಿದ್ದಾರೆ.

ರಾಜೀನಾಮೆಗೆ ನಕಾರ
ಏತನ್ಮಧ್ಯೆ, ಬಿಜೆಪಿಯ ಒತ್ತಾಯಕ್ಕೆ ರಾಮದಾಸ್ ನಕಾರ ಸೂಚಿಸಿದ್ದಾರೆ. ಎಐಐಎಂಎಸ್ ಶಾಸನವನ್ನು ಸಂಸತ್ತು ಅಂಗೀಕರಿಸಿದ್ದು ತಾನು ರಾಜೀನಾಮೆ ನೀಡುವ ಪ್ರಮೇಯವೇ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು
ರಾಮದಾಸ್‌ಗೆ ಮುಖಭಂಗ: ವೇಣುಗೋಪಾಲ್‌ಗೆ ಜಯ
ಪಂಚಾಯತ್ ಚುನಾವಣೆ: ನಂದಿಗ್ರಾಮ ಪ್ರಕ್ಷುಬ್ಧ
ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವದ ಕೊರತೆ: ಅರ್ಜುನ್ ಸಿಂಗ್
ಮೇ 20-25ರೊಳಗೆ ಆಗಮಿಸಲಿದ್ದಾನೆ ಮಳೆರಾಯ
ಐಐಎಂ-ಎಯಿಂದ ಶುಲ್ಕ ಏರಿಕೆ ಸಮರ್ಥನೆ
ವಿದ್ಯಾರ್ಥಿಗಳಿಂದ ಇಂಧನ ಮರುಬಳಕೆ ಉಪಕರಣ