ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮಸೇತು - ಎಎಸ್ಐ ತನಿಖೆ ಪರಿಗಣಿಸಿ: ಸು.ಕೋ
ನವದೆಹಲಿ: 'ರಾಮ ಸೇತು'ವನ್ನು 'ಪ್ರಾಕ್ತನ ಸ್ಮಾರಕ'ವೆಂದು ಘೋಷಿಸಬೇಕೇ ಎಂದು ನಿರ್ಧರಿಸಲು ಭಾರತೀಯ ಪುರತಾತ್ವ ಸಮೀಕ್ಷೆ(ಎಎಸ್ಐ)ಯನ್ನು ಪರಿಗಣಿಸಬೇಕು ಮತ್ತು ಈ ಯೋಜನೆಯನ್ನು ಬೇರೆಡೆ ತಳ್ಳುವ ಸಾಧ್ಯತೆಯ ಅನ್ವೇಷಣೆಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಹೇಳುವ ಮೂಲಕ ರಾಮಸೇತು ವಿವಾದ ಹೊಸ ತಿರುವು ಪಡೆದುಕೊಂಡಿದೆ.

"ರಾಮ ಸೇತು ಒಂದು ಪ್ರಾಕ್ತನ ಸ್ಮಾರಕ ಹೌದೇ ಅಲ್ಲವೇ ಎಂಬುದನ್ನು ತಿಳಿಯಲು ಭಾರತೀಯ ಪುರಾತನ ಇಲಾಖೆ ಸಮೀಕ್ಷೆ ನಡೆಸಬೇಕು ಎಂಬ ಮದ್ರಾಸ್ ಹೈಕೋರ್ಟ್‌ನ ನಿರ್ದಿಷ್ಟ ನಿರ್ದೇಶನ ಇದೆ" ಎಂದು ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠ ಹೇಳಿದೆ.

ಜನತಾ ಪಾರ್ಟಿ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಮತ್ತು ಹಿರಿಯ ನ್ಯಾಯವಾದಿ ಸಿ.ಎಸ್. ವೈದ್ಯನಾಥನ್ ಅವರುಗಳು ರಾಮ ಸೇತುವನ್ನು ಒಡೆಯುವುದನ್ನು ವಿರೋಧಿಸುತ್ತಾ, ಪುರಾತತ್ವ ತನಿಖೆ ನಡೆಸುವಂತೆ ವಾದಿಸಿದ್ದರು ಮತ್ತು ಯೋಜನೆಯನ್ನು ಬೇರೆ ಹಾದಿಯ ಮೂಲಕ ಮುಂದುವರಿಸುವ ಗಂಭೀರ ವಾದ ಮಂಡಿಸಿದ್ದರು ಎಂದು ನ್ಯಾಯಪೀಠ ಹೇಳಿದೆ.

ಈ ಯೋಜನೆಯನ್ನು ಬೇರೆ ಹಾದಿಯ ಮೂಲಕ ಮುಂದುವರಿಸುವ ಸಾಧ್ಯತೆಯನ್ನು ಅನ್ವೇಷಿಸುವಂತೆಯೂ, ನ್ಯಾಯಮೂರ್ತಿಗಳಾದ ಆರ್.ವಿ.ರವೀಂದ್ರನ್ ಮತ್ತು ಜೆ.ಎಂ.ಪಾಂಚಲ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನಿರ್ಧರಿಸಲಾಗಿದ್ದು, ಅಷ್ಟರೊಳಗಾಗಿ ಈ ಎರಡು ವಿಚಾರವನ್ನು ಕೇಂದ್ರವು ಪರಿಗಣಿಸಬೇಕು ಎಂದು ನ್ಯಾಯ ಪೀಠ ಹೇಳಿದೆ. ನ್ಯಾಯಾಲಯದ ಈ ಆದೇಶಕ್ಕೆ ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ನ್ಯಾಯವಾದಿ ಪಾಲಿ ಎಸ್ ನರಿಮನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು
ಜಮ್ಮು: ನದಿಗೆ ಬಸ್ಸು ಉರುಳಿ 20 ಮಂದಿ ಮೃತ್ಯು
ರಾಮದಾಸ್ ವಜಾಕ್ಕೆ ಬಿಜೆಪಿ ಒತ್ತಾಯ; ನಕಾರ
ರಾಮದಾಸ್‌ಗೆ ಮುಖಭಂಗ: ವೇಣುಗೋಪಾಲ್‌ಗೆ ಜಯ
ಪಂಚಾಯತ್ ಚುನಾವಣೆ: ನಂದಿಗ್ರಾಮ ಪ್ರಕ್ಷುಬ್ಧ
ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವದ ಕೊರತೆ: ಅರ್ಜುನ್ ಸಿಂಗ್
ಮೇ 20-25ರೊಳಗೆ ಆಗಮಿಸಲಿದ್ದಾನೆ ಮಳೆರಾಯ