ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಆಮ್ ಆದ್ಮಿ'ಯನ್ನು ಕಂಗೆಡಿಸಿದ ಹಣದುಬ್ಬರ ಶೇ.7.61ಕ್ಕೆ
PTI
ಸರಕಾರವು ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು, ಸಗಟು ಬೆಲೆಸೂಚ್ಯಂಕ ಆಧಾರಿತ ಹಣದುಬ್ಬರ, ಏಪ್ರಿಲ್ 26ಕ್ಕೆ ಕೊನೆಗೊಂಡ ವಾರದಲ್ಲಿ ಶೇ.7.61ಕ್ಕೆ ತಲುಪಿರುವುದನ್ನು ದೃಢ ಪಡಿಸಿದೆ.

ಹಿಂದಿನ ವಾರದಲ್ಲಿ ಹಣದುಬ್ಬರ ಶೇ.7.57ಕ್ಕೆ ತಲುಪಿತ್ತು. ಈ ದರವು ಕಳೆದ ಮೂರುವರೆ ವರ್ಷದಲ್ಲೇ ಅತ್ಯಂತ ಗರಿಷ್ಠ ದರವಾಗಿದೆ. 2004ರ ನವೆಂಬರ್ 13ಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರ ದರವು 7.68 ದಾಖಲಾಗಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ ಹಣದುಬ್ಬರವು 6.01 ಆಗಿತ್ತು.

ಹಣದುಬ್ಬರದಲ್ಲಿ ಇಳಿಕೆಯಾಗದಿರುವುದು, ಸರಕಾರವು ಕೈಗೊಂಡಿರುವ ಕಠಿಣ ಕ್ರಮಗಳು ಇನ್ನಷ್ಟೆ ಫಲ ನೀಡಬೇಕಿದೆ ಎಂಬ ಅಂಶವನ್ನು ಪ್ರತಿಫಲಿಸಿದೆ.

ಅದಾಗ್ಯೂ, ಈ ದರವು ಕೆಲವೇ ವಾರಗಳಲ್ಲಿ ನಿಯಂತ್ರಕ್ಕೆ ಬರಲಿದೆ ಎಂಬ ವಿಶ್ವಾಸ ಸರಕಾರದ್ದು. ಪ್ರಧಾನಿ ಮನಮೋಹನ್ ಸಿಂಗ್ ಅವರು ಗುವಾರವಷ್ಟೆ ಈ ಕುರಿತು ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.

ಹಣದುಬ್ಬರದ ಈ ಮಟ್ಟದ ಏರಿಕೆಯು ಜನಸಾಮಾನ್ಯನ ಉಸಿರುಕಟ್ಟಿಸಿದೆ. ಅವಶ್ಯವಸ್ತುಗಳ ಬೆಲೆ ಏರುತ್ತಲೇ ಹೋಗಿದೆ. ಹಣ್ಣು ಮತ್ತು ತರಕಾರಿಗಳ ಬೆಲೆಯಲ್ಲಿ ಒಂದು ಶೇಕಡಾ ಏರಿಕೆಯಾಗಿದ್ದರೆ, ಮೀನು ಹಾಗೂ ಸಾಗರ ಉತ್ಪನ್ನಗಳು ಎರಡು ಶೇಕಡಾ ಏರಿಕೆ ಕಂಡಿದೆ. ಸಾಂಬಾರ ಪದಾರ್ಥ ಹಾಗೂ ಏಲಕ್ಕಿ ಮೂರು ಶೇಕಡಾ ಏರಿದೆ. ಚಹದ ಬೆಲೆಯಲ್ಲಿ ಹನ್ನೊಂದು ಶೇಕಡಾ ಏರಿಕೆಯಾಗಿದೆ.

ಏತನ್ಮಧ್ಯೆ, ಹಣದುಬ್ಬರ ನಿಯಂತ್ರಣಕ್ಕೆ ಸಹಕರಿಸಲು ಮುಂದಾಗಿರುವ ಸ್ಟೀಲ್ ಕಂಪೆನಿಗಳು ಕಚ್ಚಾ ಉಕ್ಕು ಮತ್ತು ಉಕ್ಕ ಉತ್ಪನ್ನಗಳ ಬೆಲೆ ಇಳಿಸಲು ಮುಂದಾಗಿವೆ.
ಹಣದುಬ್ಬರ ನಿಯಂತ್ರಣಕ್ಕೆ ಯುದ್ಧೋಪಾದಿಯಲ್ಲಿ ಮುಂದಾಗಿರುವ ಸರಕಾರ ಆಡಳಿತಾತ್ಮಕ ಮತ್ತು ವೀತ್ತೀಯ ಎರಡೂ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಮತ್ತಷ್ಟು
ರಾಮಸೇತು - ಎಎಸ್ಐ ತನಿಖೆ ಪರಿಗಣಿಸಿ: ಸು.ಕೋ
ಜಮ್ಮು: ನದಿಗೆ ಬಸ್ಸು ಉರುಳಿ 20 ಮಂದಿ ಮೃತ್ಯು
ರಾಮದಾಸ್ ವಜಾಕ್ಕೆ ಬಿಜೆಪಿ ಒತ್ತಾಯ; ನಕಾರ
ರಾಮದಾಸ್‌ಗೆ ಮುಖಭಂಗ: ವೇಣುಗೋಪಾಲ್‌ಗೆ ಜಯ
ಪಂಚಾಯತ್ ಚುನಾವಣೆ: ನಂದಿಗ್ರಾಮ ಪ್ರಕ್ಷುಬ್ಧ
ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವದ ಕೊರತೆ: ಅರ್ಜುನ್ ಸಿಂಗ್