ಸಾಂಬಾ ವಲಯದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಬದಿಯಿಂದ ದುಷ್ಕರ್ಮಿಗಳು ಅಕ್ರಮವಾಗಿ ನುಸುಳಲು ಯತ್ನಿಸಿದ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿರುವುದಾಗಿ ಅಧಿಕೃತ ವಕ್ತಾರರು ಹೇಳಿದ್ದಾರೆ.
ಕಳೆದ ತಡ ರಾತ್ರಿಯ ವೇಳೆ ಗ್ಲಾರ್ ಪ್ರದೇಶದಲ್ಲಿ ಶಂಕಿತ ಚಲನವನಗಳು ಕಂಡು ಬಂದಾಗ, ಗಡಿಭದ್ರತಾ ಪಡೆಯ 112ನೆ ಬೆಟಾಲಿಯನ್ ಪಡೆಗಳು ಗಡಿಯಾದ್ಯಂತ ಭಾರೀ ಗುಂಡು ಹಾರಾಟ ನಡೆಸಿದ್ದಾರೆ.
ಗಡಿಯನ್ನು ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದವರೂ ಸಶಸ್ತ್ರಧಾರಿಗಳಾಗಿದ್ದು ಇತ್ತಂಡಗಳು ನಡುವೆ ಭೀಕರ ಗುಂಡು ಹಾರಾಟ ನಡೆದಿದೆ.
ಗಡಿ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಹಾಗೂ ದುಷ್ಕರ್ಮಿಗಳ ನಡುವೆ ಸುಮಾರು 400-500 ಸುತ್ತು ಗುಂಡು ಹಾರಾಟ ನಡೆದಿದೆ ಎಂದು ವಕ್ತಾರರು ಹೇಳಿದ್ದಾರೆ.
|