ಪ್ರಧಾನಿ ಮನಮೋಹನ್ ಸಿಂಗ್ ಅವರು ಆರ್ಥಿಕ ರಂಗದ ಕಾರ್ಯಕ್ಷಮತೆಯಲ್ಲಿ ವಿಫಲರಾಗಿದ್ದಾರೆ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯರ ಟೀಕೆಯನ್ನು ನಿರಾಕರಿಸಿರುವ ಪ್ರಧಾನ ಮಂತ್ರಿ ಕಚೇರಿ, ಇದನ್ನು ಹುರಳಿಲ್ಲದ್ದು ಎಂದು ತಳ್ಳಿಹಾಕಿದೆ.
ದಿನನಿತ್ಯದ ರಾಜಕೀಯದಲ್ಲಿ ಇಂತಹ ಹೇಳಿಕೆಗಳು ಆಗೀಗ ಮಾಡಲಾಗುತ್ತದೆ ಎಂದು ಹೇಳಿರುವ ಪ್ರಧಾನಿಯವರ ಮಾಧ್ಯಮ ಸಲಹೆಗಾರ ಸಂಜಯ್ ಬಾರು, ಪ್ರಧಾನಿಯವರ ಸಾಧನೆಯಕುರಿತು ರಾಷ್ಟ್ರಕ್ಕೆ ಅರಿವಿದೆ ಮತ್ತು ಅವರ ದಾಖಲೆಯು ಎಲ್ಲರಿಗೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಭಾರತೀಯ ಆರ್ಥಿಕತೆಯು ಕಳೆದ ನಾಲ್ಕು ವರ್ಷಗಳಷ್ಟು ದೃಢವಾಗಿ ಎಂದಿಗೂ ಕಾರ್ಯಕ್ಷಮತೆ ತೋರಿಲ್ಲ ಮತ್ತು ಜಾಗತಿಕವಾಗಿ ಭಾರತದ ಸ್ಥಾನಮಾನ ಇಂದಿನಂತೆ ಹಿಂದೆಂದೂ ಮೇಲೇರಿರಲಿಲ್ಲ. ಪ್ರಧಾನಿಯವರು ರಾಷ್ಟ್ರದ ಒಟ್ಟಾರೆ ಅಭಿವೃದ್ಧಿ ಸಾಧಿಸಿದ್ದಾರೆ. ವಾಸ್ತವಗಳೇ ಅವುಗಳನ್ನು ಹೇಳುತ್ತವೆ ಎಂದು ಬಾರು ಸಮರ್ಥಿಸಿಕೊಂಡಿದ್ದಾರೆ.
ಸಿಂಗ್ ಅವರನ್ನು ಗುರಿಯಾಗಿಸಿ ಭಟ್ಟಾಚಾರ್ಯ ಮಾಡಿರುವ ಟೀಕೆಗಳು ರಾಜಕೀಯದ ಭಾಗವಾಗಿದೆ ಎಂದು ಹೇಳಿದ್ದಾರೆ.
ದುರದೃಷ್ಟಕರ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರವನ್ನು ಮುನ್ನಡೆಸುತ್ತಿರುವ ರೀತಿ ದುರದೃಷ್ಟಕರವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಶುಕ್ರವಾರ ಟೀಕಿಸಿದ್ದರು.
ಪ್ರಧಾನಿಯವರು ಎಲ್ಲಾ ರಂಗದಲ್ಲೂ ವಿಫಲವಾಗಿದ್ದಾರೆ. ಕೇಂದ್ರವು ಆರ್ಥಿಕ ರಂಗದಲ್ಲಿ ಕಾರ್ಯಕ್ಷಮತೆ ತೋರಲು ವಿಫಲವಾಗಿದೆ. ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ತಡೆಯುವಲ್ಲಿ ವಿಫಲವಾಗಿದ್ದು, ಇದರ ಪ್ರತಿಫಲವು ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ವ್ಯಕ್ತವಾಗಿದೆ ಎಂದು ಭಟ್ಟಾಚಾರ್ಜಿ ಹೇಳಿದ್ದರು
|