ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರದಕ್ಷಿಣೆಗಾಗಿ ಮಗು ಕೈಗೆ ಇಸ್ತ್ರಿಪೆಟ್ಟಿಗೆಯ ಬಿಸಿ!
ವರದಕ್ಷಿಣೆ ಪ್ರಕರಣದಲ್ಲಿ ಯಾವೆಲ್ಲಾ ರೀತಿ ಹಿಂಸಾಚಾರ ಮಾಡಬಹುದು ಎಂಬುದಕ್ಕೊಂದು ಪುರಾವೆ ಇಲ್ಲಿದೆ. ಈ ಬಾರಿ ವರದಕ್ಷಿಣೆ ಪೀಡೆಗೆ ಈಡಾಗಬೇಕಾಗಿದ್ದು ಒಂದುವರೆ ವರ್ಷದ ಪುಟ್ಟ ಬಾಲಕಿ. ಸೊಸೆ ವರದಕ್ಷಿಣೆ ತಂದಿಲ್ಲ ಎಂಬ ಕಾರಣಕ್ಕೆ ಅತ್ತೆಯೊಬ್ಬಳು ತನ್ನ ಮೊಮ್ಮಗುವಿನ ಕೈಗೆ ಬಿಸಿಬಿಸಿ ಇಸ್ತ್ರಿಪೆಟ್ಟಿಗೆಯನ್ನು ತಗುಲಿಸಿದ ದಾರುಣ ಪ್ರಕರಣ ಗುಜರಾತಿನಿಂದ ವರದಿಯಾಗಿದೆ.

ಅತಿಥಿ ಎಂಬ ಪುಟ್ಟ ಬಾಲೆ ಈ ನರಕ ಯಾತನೆ ಅನುಭವಿಸಬೇಕಾಗಿದೆ. ಈ ಘಟನೆ ನಡೆದದ್ದು ಮೇ 1ರಂದು. ಈಗ ಈ ಪುಟಾಣಿ ಮಾನಸಿಕವಾಗಿ ಎಷ್ಟೊಂದು ಕುಸಿದು ಹೋಗಿದ್ದಾಳೆಂದರೆ, ಅಮ್ಮನ ಹೊರತಾಗಿ ಬೇರೆ ಯಾರೇ ಬಂದರೂ ಚೀರಾಡುತ್ತಾಳೆ. ಇದು ಆಕೆಗೆ ಮಾನಸಿಕ ಆಘಾತ ನೀಡಿದೆ ಎಂದಿದ್ದಾರೆ ಸೋಲಾ ಎಂಬಲ್ಲಿ ಆಕೆ ದಾಖಲಾಗಿರುವ ಆಸ್ಪತ್ರೆಯ ವೈದ್ಯರು.

ಅತಿಥಿಯ ತಾಯಿ ಜಿಗಿಶಾ ಹೆಚ್ಚು ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಮಗುವಿಗೆ 'ಬಿಸಿ' ಮುಟ್ಟಿಸಿದ ಕಿರಣ್ ಪಾರ್‌ಮಾರ್ ವಿರುದ್ಧ ಈಗ ನರೋಡಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಆಕೆಯೊಂದಿಗೆ ಜಿಗಿಶಾಳ ಪತಿ ರಾಜೇಶ್, ಮಾವ ನಾರಾಯಣ್, ಬಾಮೈದ ಸಂದೀಪ್ ವಿರುದ್ಧವೂ ಕೇಸು ದಾಖಲಾಗಿದೆ.

2005ರಲ್ಲಿ ಜಿಗಿಶಾ ಮತ್ತು ಖಾಡಿಯಾ ಎಂಬಲ್ಲಿನ ಮುದ್ರಣಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಮದುವೆಯಾಗಿತ್ತು. ರಾಜೇಶ್‌ನ ತಮ್ಮ ಸಂದೀಪ್ ಮದುವೆಯಾದಾಗ ಜಿಗಿಶಾಳಿಗೆ ಸಮಸ್ಯೆ ಆರಂಭವಾಯಿತು. ಯಾಕೆಂದರೆ ಸಂದೀಪ್ ಸೊಸೆ ಭಾರೀ ಮೊತ್ತದ ವರದಕ್ಷಿಣೆಯೊಂದಿಗೆ ಬಂದಿದ್ದಳು. ಈ ಅತ್ತೆ ತನ್ನ ಸೊಸೆಯರಿಬ್ಬರನ್ನು ವರದಕ್ಷಿಣೆಯ ಆಧಾರದಲ್ಲಿ ಅಳೆದು ತೂಗತೊಡಗಿದ್ದಳು. ಈ ವರದಕ್ಷಿಣೆ ಎಂಬ ದುರಾಸೆಯ ಪರಿಣಾಮ ಈಗ ಪೊಲೀಸ್ ಠಾಣೆವರೆಗೆ ತಲುಪಿದೆ.
ಮತ್ತಷ್ಟು
ಬುದ್ಧ ಹೇಳಿಕೆ ಹುರುಳಿಲ್ಲದ್ದು: ಪಿಎಂಓ
ಮೇವು ಹಗರಣ: ಬಿಹಾರ ಸರಕಾರಕ್ಕೆ ನೋಟೀಸ್
ವಿಷಾಹಾರ: ವೈಷ್ಣೋದೇವಿ ಯಾತ್ರಿ ಸಾವು
ಭಾರತ-ಪಾಕ್ ಗಡಿಯಲ್ಲಿ ಭಾರೀ ಕಾದಾಟ
'ಆಮ್ ಆದ್ಮಿ'ಯನ್ನು ಕಂಗೆಡಿಸಿದ ಹಣದುಬ್ಬರ ಶೇ.7.61ಕ್ಕೆ
ರಾಮಸೇತು - ಎಎಸ್ಐ ತನಿಖೆ ಪರಿಗಣಿಸಿ: ಸು.ಕೋ