ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತುರ್ತುಸ್ಥಿತಿ ವೇಳೆ ಇಂದಿರಾ, ಸಂಜಯ್‌ರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೆ: ಅರ್ಜುನ್ ಸಿಂಗ್
PIB
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಹಾಗೂ ಅವರ ಪುತ್ರ ಸಂಜಯ್ ಗಾಂಧಿಯೊಂದಿಗೆ, ತುರ್ತುಪರಿಸ್ಥಿತಿ ಘೋಷಣೆ ಕುರಿತು ಭಿನ್ನಾಭಿಪ್ರಾಯ ಹೊಂದಿದ್ದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಶುಕ್ರವಾರ ಹೇಳಿದ್ದಾರೆ.

ಸಿಂಗ್ ಅವರ ಸಾರ್ವಜನಿಕ ಜೀವನದ ಕುರಿತ ಲೇಖನಗಳನ್ನು ಹೊಂದಿರುವ ಪುಸ್ತಕ 'ಮೊಹಿನ್ ಕಹನ್ ವಿಶ್ರಾಮ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. "ಆದರೂ, 1980ರ ಚುನಾವಣೆಯಲ್ಲಿ ತನಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ನೀಡಲಾಗಿತ್ತು ಮತ್ತು ಸಂಜಯ್ ಗಾಂಧಿ ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಆಗಿನ ಕಾಂಗ್ರೆಸ್ ಸಂಸ್ಕೃತಿ ಹಾಗಿತ್ತು" ಎಂದು ಸಚಿವರು ನೆನಪಿಸಿಕೊಂಡರು.

ಇಂದಿನ ಕಾಂಗ್ರೆಸ್ ಸ್ಥಿತಿಗತಿಗಳ ಕುರಿತು ಮಾತನಾಡಿದ ಅರ್ಜುನ್ ಸಿಂಗ್, ಇಂದು ನಿಯತ್ತನ್ನು ಅಳೆಯುವ ಅಳತೆಗೋಲು ಸೀಮಿತಗೊಂಡಿದೆ ಎಂದು ನುಡಿದರು. ಸಂಜಯ್ ಗಾಂಧಿ ಹಾಗೂ ಇಂದಿರಾ ಗಾಂಧಿ ಇಬ್ಬರೂ, ತುರ್ತುಪರಿಸ್ಥಿತಿ ವೇಳೆ ತನ್ನ ಮನದ ಮಾತುಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿದ್ದರೆಂದು ತಿಳಿಸಿದರು.

ತುರ್ತುಪರಿಸ್ಥಿತಿ ಘೋಷಣೆಯನ್ನು ದುರ್ಬಳಕೆ ಮಾಡಿಕೊಳ್ಳಬಹುದೆಂಬ ಭೀತಿಯಿಂದ ತಾನದನ್ನು ವಿರೋಧಿಸಿದ್ದಾಗಿ ಅವರು ಸ್ಪಷ್ಟಪಡಿಸಿದರು. ತನ್ನ ಈ ಭಿನ್ನಾಭಿಪ್ರಾಯವು ತುರ್ತುಪರಿಸ್ಥಿತಿ ವೇಳೆ ಇಂದಿರಾ ಗಾಂಧಿಯವರ ಸಂಪುಟದಿಂದ ತನ್ನನ್ನು ಹೊರಗಿಟ್ಟಿರಬಹುದು, ಆದರೆ, 1980 ಚುನಾವಣೆಗೆ ಟಿಕೆಟ್ ಪಡೆಯುವುದನ್ನು ತಡೆಯಲಿಲ್ಲ ಎಂದು ಹೇಳಿದರು.

ಪಕ್ಷದೊಳಗಿನ ಶಕ್ತಿಗಳು ತನ್ನನ್ನು ಆರಂಭದಿಂದಲೇ ಕಳಗೆಳೆಯಲು ಪ್ರಯತ್ನಿಸುತ್ತಿದ್ದವು ಎಂದೂ ಅವರು ನುಡಿದರು.
ಮತ್ತಷ್ಟು
ವರದಕ್ಷಿಣೆಗಾಗಿ ಮಗು ಕೈಗೆ ಇಸ್ತ್ರಿಪೆಟ್ಟಿಗೆಯ ಬಿಸಿ!
ಬುದ್ಧ ಹೇಳಿಕೆ ಹುರುಳಿಲ್ಲದ್ದು: ಪಿಎಂಓ
ಮೇವು ಹಗರಣ: ಬಿಹಾರ ಸರಕಾರಕ್ಕೆ ನೋಟೀಸ್
ವಿಷಾಹಾರ: ವೈಷ್ಣೋದೇವಿ ಯಾತ್ರಿ ಸಾವು
ಭಾರತ-ಪಾಕ್ ಗಡಿಯಲ್ಲಿ ಭಾರೀ ಕಾದಾಟ
'ಆಮ್ ಆದ್ಮಿ'ಯನ್ನು ಕಂಗೆಡಿಸಿದ ಹಣದುಬ್ಬರ ಶೇ.7.61ಕ್ಕೆ