ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಖಿಲೇಶ್‌ಗೆ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಪಟ್ಟ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯ ಸುತ್ತ ಭಟ್ಟಂಗಿಗಳು ತುಂಬಿರುತ್ತಾರೆ ಎಂದು ಆಪಾದಿಸಿ ಕಾಂಗ್ರೆಸ್ ಪಕ್ಷದಿಂದ ಹೊರನಡೆದ ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಶನಿವಾರ ಬಿಎಸ್‌ಪಿ ಸೇರಿದ್ದಾರೆ.

ಅಖಿಲೇಶ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಎಸ್‌ಪಿ ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಮಾಯಾವತಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಖಿಲೇಶ್ ಅವರು ಲಕ್ನೋ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದರು. ಅಲ್ಲದೆ ಈ ಹಿರಿಯ ನಾಯಕನನ್ನು ಬಿಎಸ್‌ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದರು.

ದಾಸ್ ಅವರಲ್ಲದೆ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಎಐಸಿಸಿ ಸದಸ್ಯ ಸಿರಾಜ್ ಮೆಹಂದಿ ಹಾಗೂ ಅವರ ಕೆಲವು ಬೆಂಬಲಿಗರೂ ಬಿಎಸ್‌ಪಿಗೆ ಸೇರಿದರು.

ಇತ್ತೀಚೆಗೆ ಕೇಂದ್ರ ಮಂತ್ರಿಮಂಡಲ ವಿಸ್ತರಣೆ ವೇಳೆ ಅಖಿಲೇಶ್ ದಾಸ್ ಅವರನ್ನು ಮಂತ್ರಿ ಮಂಡಲದಿಂದ ಕೈಬಿಡಲಾಗಿತ್ತು.
ಮತ್ತಷ್ಟು
ಗರ್ಭಿಣಿ ಮಗಳನ್ನು ಕೊಂದು ಪ್ರದರ್ಶನಕ್ಕಿಟ್ಟ!
ತುರ್ತುಸ್ಥಿತಿ ವೇಳೆ ಇಂದಿರಾ, ಸಂಜಯ್‌ರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೆ: ಅರ್ಜುನ್ ಸಿಂಗ್
ವರದಕ್ಷಿಣೆಗಾಗಿ ಮಗು ಕೈಗೆ ಇಸ್ತ್ರಿಪೆಟ್ಟಿಗೆಯ ಬಿಸಿ!
ಬುದ್ಧ ಹೇಳಿಕೆ ಹುರುಳಿಲ್ಲದ್ದು: ಪಿಎಂಓ
ಮೇವು ಹಗರಣ: ಬಿಹಾರ ಸರಕಾರಕ್ಕೆ ನೋಟೀಸ್
ವಿಷಾಹಾರ: ವೈಷ್ಣೋದೇವಿ ಯಾತ್ರಿ ಸಾವು