ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಂದಿಗ್ರಾಮ:ಡಿಐಜಿ ವಿರುದ್ದ ಪ್ರಕರಣ ದಾಖಲು
ನಂದಿಗ್ರಾಮದ ಸೋನಾಚೌರಾ ಗ್ರಾಮದಲ್ಲಿ ಕೇಂದ್ರ ಮೀಸಲು ಪಡೆಯ ಡಿಐಜಿ ಅಲೋಕ್ ರಾಜ್ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಇಬ್ಬರು ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ.

ಕೇಂದ್ರ ಮೀಸಲು ಪಡೆಗಳು ದಾಳಿ ನಡೆಸಿದ ಸಂದರ್ಭದಲ್ಲಿ ಮೀಸಲು ಪಡೆಯ ಡಿಐಜಿ ಅಲೋಕ್ ರಾಜ್ ಹಿಂಸಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಇಬ್ಬರು ಮಹಿಳೆಯರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆಂದು ನಂದಿಗ್ರಾಮ ಪೋಲೀಸ್ ಠಾಣೆಯ ಅಧಿಕಾರಿ ದೇಬಶೀಷ್ ಚಕ್ರವರ್ತಿ ತಿಳಿಸಿದ್ದಾರೆ.

ಮಹಿಳೆಯರ ಆರೋಪಗಳನ್ನು ತಳ್ಳಿಹಾಕಿದ ಕೇಂದ್ರ ಮೀಸಲು ಪಡೆಯ ಡಿಐಜಿ ಅಲೋಕ್ ರಾಜ್ ನನ್ನನ್ನು ಕರ್ತವ್ಯದಿಂದ ತಡೆಯಲು ಇಂತಹ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ ಇಂತಹ ಆರೋಪಗಳಿಗೆ ನಾನು ಭಯಪಡುವುದಿಲ್ಲ ನನ್ನ ಕರ್ತವ್ಯವನ್ನು ನಾನು ನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಕೇಂದ್ರ ಮೀಸಲು ಪಡೆ ದಾಳಿ ನಡೆಸಿದ ಸಂದರ್ಭದಲ್ಲಿ ನಾನು ಸಭೆಯಲ್ಲಿ ಉಪಸ್ಥಿತನಿದ್ದು ನಾನು ಕೇಂದ್ರ ಮೀಸಲು ಪಡೆಯ ಶಿಬಿರವನ್ನು ಬಿಟ್ಟು ಹೊರಗೆ ಹೋಗಿರಲಿಲ್ಲ.ಆದರೆ ಪೋಲೀಸರು ಕೂಡಾ ನನ್ನ ವಿರುದ್ದ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ನೀಡಿಲ್ಲವೆಂದರು.



ಮತ್ತಷ್ಟು
ಅಖಿಲೇಶ್‌ಗೆ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಪಟ್ಟ
ಗರ್ಭಿಣಿ ಮಗಳನ್ನು ಕೊಂದು ಪ್ರದರ್ಶನಕ್ಕಿಟ್ಟ!
ತುರ್ತುಸ್ಥಿತಿ ವೇಳೆ ಇಂದಿರಾ, ಸಂಜಯ್‌ರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೆ: ಅರ್ಜುನ್ ಸಿಂಗ್
ವರದಕ್ಷಿಣೆಗಾಗಿ ಮಗು ಕೈಗೆ ಇಸ್ತ್ರಿಪೆಟ್ಟಿಗೆಯ ಬಿಸಿ!
ಬುದ್ಧ ಹೇಳಿಕೆ ಹುರುಳಿಲ್ಲದ್ದು: ಪಿಎಂಓ
ಮೇವು ಹಗರಣ: ಬಿಹಾರ ಸರಕಾರಕ್ಕೆ ನೋಟೀಸ್