ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರು ಸೇನೆಯ ಮಧ್ಯೆ ಘರ್ಷಣೆ:3 ಸಾವು
ಇಲ್ಲಿನ ಸಾಂಬಾ ಗಡಿಪ್ರದೇಶದಲ್ಲಿ ಶುಕ್ರವಾರವಷ್ಟೇ ಭದ್ರತಾ ಪಡೆ ಮತ್ತು ನುಸುಳುಕೋರರ ನಡುವೆ ಘರ್ಷಣೆ ನಡೆದ ಬೆನ್ನಲ್ಲೇ, ಭಾನುವಾರ ಲೈನ್ ಆಫ್ ಕಂಟ್ರೋಲ್(ಎಲ್‌ಒಸಿ)ನಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಘರ್ಷಣೆ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ನಡೆಸಿದ ಗೋಲಿಬಾರ್‌‌ಗೆ 3ಮಂದಿ ಬಲಿಯಾಗಿದ್ದು, ಇಬ್ಬರು ಗಾಯಗೊಂಡಿರುವುದಾಗಿ ಜಮ್ಮು ವಲಯದ ಪೊಲೀಸ್ ಮಹಾನಿರ್ದೇಶಕ ಕೆ.ರಾಜೇಂದ್ರ ಅವರು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಜಮ್ಮುನಿನ ಸಾಂಬಾ ಸೆಕ್ಟ್‌‌ರ್‌‌ನಲ್ಲಿ ಪಾಕಿಸ್ತಾನದ ಇಬ್ಬರು ಭಯೋತ್ಪಾದಕರು ರಕ್ಷಣಾ ಬೇಲಿಯಿಂದ ಬಲವಂತವಾಗಿ ನುಸುಳಲು ಯತ್ನಿಸಿದ ಸಂದರ್ಭದಲ್ಲಿ ಗುಂಡಿನ ಘರ್ಷಣೆ ನಡೆದಿತ್ತು.

ನುಸುಳುಕೋರರು ಸಮವಸ್ತ್ರಧಾರಿಗಳಾಗಿದ್ದು ಅತಿಕ್ರಮಣ ಪ್ರವೇಶ ಮಾಡುತ್ತಿರುವುದನ್ನು ಗಡಿಭದ್ರತಾ ಪಡೆಯವರು ಗುಂಡಿನ ಮಳೆಗೆರೆಯುವ ಮೂಲಕ ಭಾರೀ ಪ್ರಮಾಣದ ಘರ್ಷಣೆ ನಡೆದಿದ್ದು. ಇದರಲ್ಲಿ ಇಬ್ಬರು ಭಯೋತ್ಪಾದಕರು,ಒಬ್ಬ ಗ್ರಾಮಸ್ಥ ಸೇರಿದಂತೆ ಮೂವರು ಹತರಾಗಿದ್ದಾರೆ.
ಕುಪ್ವಾರಾ ಜಿಲ್ಲೆಯಲ್ಲಿ ಜಮ್ಮು ಪೊಲೀಸ್ ಹಾಗೂ 17 ಡೋಗ್ರಾ ಜವಾನ್ಸ್ ಗರ್ಬಾರ್ ಅರಣ್ಯದಲ್ಲಿ ಜಂಟಿ ಕೂಂಬಿಂಗ್ ಕಾರ್ಯಾಚರಣೆಗೆ ಇಳಿದಿರುವುದಾಗಿ ತಿಳಿಸಿದೆ.

ಈ ಉಗ್ರರು ಮನೆಯೊಂದರಲ್ಲಿ ಅಡಗಿ ಕುಳಿತು ಈ ದಾಳಿಯನ್ನು ನಡೆಸಿರುವುದಾಗಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಪಂಚಾಯಿತಿ ಚುನಾವಣೆ: ಉದ್ರಿಕ್ತ ಸ್ಥಿತಿ
ನಂದಿಗ್ರಾಮ:ಡಿಐಜಿ ವಿರುದ್ದ ಪ್ರಕರಣ ದಾಖಲು
ಅಖಿಲೇಶ್‌ಗೆ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಪಟ್ಟ
ಗರ್ಭಿಣಿ ಮಗಳನ್ನು ಕೊಂದು ಪ್ರದರ್ಶನಕ್ಕಿಟ್ಟ!
ತುರ್ತುಸ್ಥಿತಿ ವೇಳೆ ಇಂದಿರಾ, ಸಂಜಯ್‌ರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೆ: ಅರ್ಜುನ್ ಸಿಂಗ್
ವರದಕ್ಷಿಣೆಗಾಗಿ ಮಗು ಕೈಗೆ ಇಸ್ತ್ರಿಪೆಟ್ಟಿಗೆಯ ಬಿಸಿ!