ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇನಾ ಸಿಬ್ಬಂದಿಗಳಿಂದ ಸಾಮೂಹಿಕ ಅತ್ಯಾಚಾರ
ನಗರದ ಕೆಂಪು ದೀಪ ಪ್ರದೇಶದಲ್ಲಿ ಮನೆಕೆಲಸದ ಸಹಾಯಕಿಯಾಗಿ ದುಡಿಯುತ್ತಿದ್ದ ಮಹಿಳೆಯೊಬ್ಬಳ ಮೇಲೆ ಮೂವರು ಸೇನಾ ಸಿಬ್ಬಂದಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಭಗತ್ ಗಲ್ಲಿಯಲ್ಲಿ ಮೂವರು ಸೈನಿಕರು ತನ್ನ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ್ದಾಗಿ 42ರ ಹರೆಯದ ಮಹಿಳೆಯೊಬ್ಬಾಕೆ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ.

ಮಹಿಳೆಯು ಸಹಾಯಕ್ಕಾಗಿ ಬೊಬ್ಬೆ ಹೊಡೆದಾಗ ಜಾಗದಿಂದ ಪರಾರಿಯಾಗಲೆತ್ನಿಸಿದ, ಸ್ಥಳೀಯರು ವೆಂಕಟೇಶ್ ವೆಂಕಯ್ಯ ದ್ವಂಡ್ವಾಡಿ(32) ಎಂಬಾತನ್ನು ಹಿಡಿದಿದ್ದು ಆತನನ್ನು ಗುರುತಿಸಲಾಗಿದೆ.

ಈ ಹೇಯ ಕೃತ್ಯದ ಕುರಿತು ಘಟನೆ ನಡೆದ ಶನಿವಾರ ರಾತ್ರಿ ದೂರು ನೀಡದಂತೆ ಸೇನಾ ಸಿಬ್ಬಂದಿಗಳು ಮತ್ತು ಪೊಲೀಸರು ಮಹಿಳೆಯ ಮೇಲೆ ಒತ್ತಡ ಹೇರಿದ್ದಾರೆಂದು ಸ್ಥಳೀಯ ಎನ್‌ಜಿಓ ದೂರಿದೆ. ಅಲ್ಲದೆ, ಈ ವೇಳೆ ವೆಂಕಟೇಶ್ ಪರಾರಿಯಾಗಿರಬಹುದು ಎಂದೂ ಶಂಕಿಸಿದೆ.

ಬಲಿಪಶು ಮಹಿಳೆಗೆ ಎನ್‌ಜಿಓ ಕಾರ್ಯಕರ್ತರು ಬೆಂಬಲ ಸೂಚಿಸಿದ ಬಳಿಕ, ಆಕೆ ಭಾನುವಾರ ಮಧ್ಯಾಹ್ನ ವೆಂಕಟೇಶ್ ಹಾಗೂ ಇತರ ಇಬ್ಬರ ವಿರುದ್ಧ ದೂರು ನೀಡಿದ್ದಳು.

ಬಲಿಪಶು ಮಹಿಳೆ ಈ ಪ್ರದೇಶದ ವೇಶ್ಯಾಗೃಹಗಳಲ್ಲಿ ಗುಡಿಸಿ ಒರೆಸುವ ಕೆಲಸ ಮಾಡುತ್ತಿದ್ದಳೇ ವಿನಹ ಆಕೆ ವೇಶ್ಯೆಯಲ್ಲ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ತುಕಾರಾಂ ಮೊಹಿಲೆ ಹೇಳಿದ್ದಾರೆ. ಮೂವರು ಆರೋಪಿತರ ಪತ್ತೆಗೆ ಶೋಧಕಾರ್ಯ ಮುಂದುವರಿದಿದ್ದು ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಉಗ್ರರು ಸೇನೆಯ ಮಧ್ಯೆ ಘರ್ಷಣೆ:3 ಸಾವು
ಪಂಚಾಯಿತಿ ಚುನಾವಣೆ: ಉದ್ರಿಕ್ತ ಸ್ಥಿತಿ
ನಂದಿಗ್ರಾಮ:ಡಿಐಜಿ ವಿರುದ್ದ ಪ್ರಕರಣ ದಾಖಲು
ಅಖಿಲೇಶ್‌ಗೆ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಪಟ್ಟ
ಗರ್ಭಿಣಿ ಮಗಳನ್ನು ಕೊಂದು ಪ್ರದರ್ಶನಕ್ಕಿಟ್ಟ!
ತುರ್ತುಸ್ಥಿತಿ ವೇಳೆ ಇಂದಿರಾ, ಸಂಜಯ್‌ರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೆ: ಅರ್ಜುನ್ ಸಿಂಗ್