ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಂಬಾದಲ್ಲಿ ಕೂಂಬಿಂಗ್, ಪರಿಸ್ಥಿತಿ ಉದ್ವಿಗ್ನ
ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ, ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಸುಮಾರು 12 ಗಂಟೆಗಳ ಕಾಲ ಸತತ ಗುಂಡಿನ ಚಕಮಕಿ ನಡೆದ ಒಂದು ದಿನದ ಬಳಿಕವೂ ಇಲ್ಲಿನ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಇದೆ.

ಗಡಿ ಭದ್ರತಾ ಪಡೆಯು ಇದೀಗ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಸೋಮವಾರ ಮುಂಜಾನೆ ಕರ್ಡಿ ಪ್ರದೇಶದಲ್ಲಿ ಗುಂಡು ಹಾರಾಟದ ಮತ್ತಷ್ಟು ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಮಗ್ರ ಹುಡುಕಾಟಕ್ಕೆ ಗಡಿ ಭದ್ರತಾ ಪಡೆ ಮುಂದಾಗಿದೆ.

ಭಾನುವಾರದ ಗುಂಡಿನ ಚಕಮಕಿಯಲ್ಲಿ ಒಬ್ಬ ಭಯೋತ್ಪಾದ ಸಾವಿಗೀಡಾಗಿದ್ದಾನೆ. ಈತ ಪೂರ್ವಾಹ್ನ ಸುಮಾರು 11 ಗಂಟೆಯ ವೇಳೆಗೆ ಸೇನಾ ಮುಖ್ಯಕಚೇರಿಗೆ ನುಸುಳಲು ಪ್ರಯತ್ನಿಸುತ್ತಿದ್ದ.

ಸಾಂಬಾ, ಬಿಂಗ್ ಅಂಬಾ ಮತ್ತು ಅಂತಾರಾಷ್ಟ್ರೀಯ ಗಡಿ ತಲುಪುವ ಉತ್ತರದ ಬೆಟ್ಟ ಪ್ರದೇಶವನ್ನು ಭದ್ರತಾ ಪಡೆಗಳು ಸಂಪೂರ್ಣ ವಶಪಡಿಸಿಕೊಂಡಿವೆ. ಈ ಪ್ರದೇಶದಲ್ಲಿ ಇನ್ನಷ್ಟು ಉಗ್ರಗಾಮಿಗಳು ಅಡಗಿರಬಹುದು ಎಂದು ಲೆಫ್ಟಿನೆಂಟ್ ಜನರಲ್ ವಿನಯ್ ಶರ್ಮಾ ಹೇಳಿದ್ದಾರೆ.

"ಇನ್ನಷ್ಟು ಅಕ್ರಮ ನುಸುಳುವಿಕೆಗಳು ಸಂಭವಿಸಬಹುದು ಎಂಬ ವರದಿಗಳಿವೆ. ಸುತ್ತಮುತ್ತಲ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಸಂಭವವಿದೆ. ರಕ್ಷಣಾ ದಳದ ಹೊರಗಡೆ ಮತ್ತು ಇತರ ಪಟ್ಟಣಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿರುವುದಾಗಿ" ಶರ್ಮಾ ಖಾಸಗೀ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಸಾಂಬಾ ಪ್ರದೇಶದ ಗಡಿಮೂಲಕ ದುಷ್ಕರ್ಮಿಗಳು ಅಕ್ರಮ ನುಸುಳುವಿಕೆ ಪ್ರಯತ್ನ ನಡೆಸಿದ ಕಾರಣ ಶನಿವಾರದಿಂದಲೇ ಗಡಿ ಪ್ರದೇಶದಲ್ಲಿ ಭೀಕರ ಕದನ ನಡೆದಿದ್ದು, ದುಷ್ಕರ್ಮಿಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು
ಮನುಶರ್ಮಾಗೆ ಸು.ಕೋ ಜಾಮೀನು ನಕಾರ
ಚಿಕೆತ್ಸೆಗೆ ದಾಖಲಾಗಿದ್ದ ಕೈದಿ ಆಸ್ಪತ್ರೆಯಿಂದ ಪರಾರಿ
ಸೇನಾ ಸಿಬ್ಬಂದಿಗಳಿಂದ ಸಾಮೂಹಿಕ ಅತ್ಯಾಚಾರ
ಉಗ್ರರು ಸೇನೆಯ ಮಧ್ಯೆ ಘರ್ಷಣೆ:3 ಸಾವು
ಪಂಚಾಯಿತಿ ಚುನಾವಣೆ: ಉದ್ರಿಕ್ತ ಸ್ಥಿತಿ
ನಂದಿಗ್ರಾಮ:ಡಿಐಜಿ ವಿರುದ್ದ ಪ್ರಕರಣ ದಾಖಲು