ಜಮ್ಮು: ಜಮ್ಮು ಕಾಶ್ಮೀರದ ಗಡಿಯಲ್ಲಿರುವ ಪೂಂಛ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಲಷ್ಕರೆ ತೋಯ್ಬಾದ ಉಗ್ರನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಸುರನ್‌ಕೋಟ್‌ನ ದಾರಬ ಎಂಬಲ್ಲಿ ಸೋಮವಾರ ನಸುಕಿನಲ್ಲಿ 16 ರಾಷ್ಟ್ರೀಯ ರೈಫಲ್ಸ್(ಸಿಖ್) ಹಾಗೂ ಪೊಲೀಸ್ ವಿಶೇಷ ಕಾರ್ಯಾಚರಣೆ ಪಡೆಯ ನಡುವಿನ ಜಂಟಿ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರಗಾಮಿ ಹತನಾಗಿದ್ದಾನೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನೆಲ್ ಎಸ್.ಡಿ. ಗೋಸ್ವಾಮಿ ತಿಳಿಸಿದ್ದಾರೆ.
|