ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಮಾನಕಳೆದ' ಇನ್ನೊಬ್ಬ ಮಗಳ ಕೊಲೆ
'ಮರ್ಯಾದೆ ತೆಗೆದ' ಗರ್ಭಿಣಿ ಮಗಳನ್ನು ಕೊಂದು ಸಾರ್ವಜನಿಕ ಪ್ರದರ್ಶನಕ್ಕಿಟ್ಟ ಹರ್ಯಾಣದ ಅಪ್ಪನೊಬ್ಬನ ಕ್ರೌರ್ಯದ ಸುದ್ದಿ ನೆನಪಿನಿಂದ ಮಾಯುವ ಮುನ್ನವೇ, 'ಮಾನ ಕಳೆದ' ಮಗಳನ್ನು ಇನ್ನೋರ್ವ ಅಪ್ಪನೂ ಕೊಂದು ಹಾಕಿರುವ ದುರ್ಘಟನೆ ವಡೋದರದಲ್ಲಿ ಸಂಭವಿಸಿದೆ.

ನಿವೃತ್ತ ಸೇನಾ ಜವಾನ ದೈವೀರ್ ಸಿನ್ಹಾ ಬೆದೋರಿಯಾಗೆ ತನ್ನ 20ರ ಹರೆಯದ ಮಗಳು ವಂದನಾ ತನ್ನಿಷ್ಟದ ಹುಡುಗನನ್ನೇ ವರಿಸಿದ್ದು ಪಥ್ಯವಾಗಿರಲಿಲ್ಲ. ಮಗಳು ತನ್ನಿಚ್ಛೆಗೆ ವಿರುದ್ಧವಾಗಿ ನಡೆಯುತ್ತಾಳೆ ಎಂದು ಕುಪಿತಗೊಂಡ ದೈವೀರ್ ಆಕೆಗೆ ಬೇರೆ ಗಂಡನ್ನು ಗೊತ್ತು ಮಾಡಿದ್ದ. ಆದರೆ, ಹೆತ್ತವರನ್ನು ಧಿಕ್ಕರಿಸಿದ ವಂದನಾ ತಾನು ಮೆಚ್ಚಿದ್ದ ಹುಡುಗನನ್ನೇ ಆರು ತಿಂಗಳ ಹಿಂದೆ ವಿವಾಹವಾಗಿದ್ದಳು.

ಆರು ತಿಂಗಳ ಹಿಂದೆಯೇ ವಂದನಾ ವಿವಾಹವಾಗಿದ್ದರೂ, ಆಕ್ರೋಶದಿಂದ ಕುದಿಯುತ್ತಿದ್ದ ದೈವೀರ್ ನಗರದ ಹೊರವಲಯದ ಮಕರ್‌ಪುರದಲ್ಲಿರುವ ತನ್ನ ಮನೆಯಲ್ಲಿ ಮಗಳನ್ನು ಕೊಚ್ಚಿ ಕೊಂದು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂದನಾಳಿಗೆ ದೂರವಾಣ್ ಕರೆ ನೀಡಿದ ದೈವೀರ್, ಮನೆಗೆ ಬಂದು ಚೆಕ್ ಒಂದನ್ನು ಒಯ್ಯುವಂತೆ ತಿಳಿಸಿದ್ದ. ಅಂತೆಯೇ ಆಕೆ ಮನೆಗೆ ಬಂದಾಗ ರಿವಾಲ್ವರ್‌ನಿಂದ ಮೂರು ಸುತ್ತು ಗುಂಡು ಹಾರಿಸಿ ಆಕೆಯನ್ನು ಕೊಲ್ಲಲು ಯತ್ನಿಸಿದ. ಅದೇ ಪ್ರದೇಶದ ಯುವಕನೊಬ್ಬ ಗುಂಡಿನಿಂದ ಆಕೆಯನ್ನು ರಕ್ಷಿಸಿದ್ದ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ದೈವೀರ್ ವಂದನಾಳನ್ನು ಮನೆಯೊಳಗೆ ಎಳೆದೊಯ್ದು ಮಚ್ಚಿನಿಂದ ಕೊಚ್ಚಿಹಾಕಿದನೆನ್ನಲಾಗಿದೆ.

ಮರಾಠಿ ಹುಡುಗನನ್ನು ವಿವಾಹವಾಗಿರುವುದೇ ವಂದನಾ ಎಸಗಿದ ಅಪರಾಧವಾಗಿತ್ತು, ಆಕೆಯ ಹೆತ್ತವರಿಗೆ. ವಂದನಾಳ ಹತ್ಯೆಗೆ ಆಕೆಯ ತಾಯಿ ಹಾಗೂ ಸಹೋದರಿಯೂ ಸಹಾಯ ಮಾಡಿದಳೆಂದು ಪ್ರತ್ಯಕ್ಷದರ್ಶಿ ಯುವಕ ತಿಳಿಸಿದ್ದಾನೆ.
ಮತ್ತಷ್ಟು
ಪೂಂಛ್‌: ಸೇನೆಯಿಂದ ಲಷ್ಕರೆ ಉಗ್ರನ ಹತ್ಯೆ
ವಿವಾದಾಸ್ಪದ ಸ್ವಾಮಿ ಅಮೃತ ಚೈತನ್ಯ ಬಂಧನ
ಕುಡಿತ: ವಯೋಮಿತಿ ಇಳಿಸಲು ದಿಲ್ಲಿ ಸರಕಾರ ನಕಾರ
ಮುಂಬೈ ಸ್ಫೋಟ ಅಪರಾಧಿ ಗಲ್ಲಿಗೆ ಸು.ಕೋ. ತಡೆ
ಸಾಂಬಾದಲ್ಲಿ ಕೂಂಬಿಂಗ್, ಪರಿಸ್ಥಿತಿ ಉದ್ವಿಗ್ನ
ಮನುಶರ್ಮಾಗೆ ಸು.ಕೋ ಜಾಮೀನು ನಕಾರ