ಸೇನೆ ಮತ್ತು ವಾಯುಪಡೆಯ ಪ್ರಮುಖ ಸ್ಥಾನಗಳನ್ನು ಸಮರ್ಥವಾಗಿ ನಿಭಾಯಿಸಿರುವ ಮಹಿಳೆ, ಇದೀಗ ದೇಶದ ಪ್ರಮುಖ ಕ್ಷಿಪಣಿ ಯೋಜನೆಯ ನಾಯಕತ್ವವನ್ನು ವಹಿಸಿಕೊಳ್ಳಲು ಮುಂದಾಗಿದ್ದಾರೆ.
ಡಿಆರ್‌ಡಿಒದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ 45 ವರ್ಷ ವಯಸ್ಸಿನ ಡಾ.ಟೆಸ್ಸಿ ಥಾಮಸ್, ಅವರು ಸುಮಾರು 2000 ಕಿ.ಮೀ. ಹಾರಬಲ್ಲ ಪರಮಾಣು ಸಾಮರ್ಥ್ಯದ ಅಗ್ನಿ-II ಕ್ಷಿಪಣಿಯ ನವೀಕೃತ ಆವೃತ್ತಿಯ ಯೋಜನಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಡಿಆರ್‌ಡಿಒದಲ್ಲಿ ಕಾರ್ಯನಿರ್ವಹಿಸುತ್ತಿರು ಸುಮಾರು 200 ಜನ ಮಹಿಳಾ ವಿಜ್ಞಾನಿಗಳು ಮತ್ತು ತಂತ್ರಜ್ಞರಲ್ಲಿ ಇವರು ಒಬ್ಬರಾಗಿದ್ದಾರೆ.
ಥಾಮಸ್ ಅವರು ಪ್ರಸ್ತುತ 3000 ಸಾವಿರ ಕಿ.ಮೀ. ದೂರ ಹಾರಬಲ್ಲ ಅಗ್ನಿ-III ಯೋಜನೆಯ ಸಹಾಯಕ ನಿರ್ದೇಶಕಿಯಾಗಿದ್ದಾರೆ.
ಅಗ್ನಿ-IIIರ ಯಶಸ್ವಿಗಾಗಿ ಸೋಮವಾರ ಇಡೀ ತಂಡದ ಜೊತೆ ಪ್ರಧಾನ ಮಂತ್ರಿಗಳಿಂದ ಸನ್ಮಾನ ಸ್ವೀಕರಿಸಿದ ಥಾಮಸ್ ಅವರನ್ನು ಅಗ್ನಿ-IIರ ಬಗ್ಗೆ ಪ್ರಶ್ನಿಸಿದಾಗ, ಇದು ಅತ್ಯಂತ ಗೌಪ್ಯ ಯೋಜನೆಯಾಗಿದೆ ಎಂದು ನುಡಿದ ಅವರು, ಇದನ್ನು ಅಗ್ನಿ-II ಎ(2) ಎಂದು ಕರೆಯಲಾಗುತ್ತದೆ ಎಂದಷ್ಟೆ ತಿಳಿಸಿದರು.
ನಾನು ನನ್ನ ವೃತ್ತಿಯನ್ನು ಇಷ್ಟಪಡುತ್ತೇನೆ. ನನ್ನ ದೇಶಕ್ಕಾಗಿ ಸೇವೆ ನೀಡುತ್ತಿದ್ದೇನೆಂಬ ಭಾವನೆ ನನ್ನದು. ಆದ್ದರಿಂದ ತಾವು ತಮ್ಮ ಮಗನಿಗೆ ದೇಶದ ಹಗುರ ಯುದ್ದ ಕ್ಷಿಪಣಿ 'ತೇಜಸ್'ನ ಹೆಸರನ್ನು ಇಟ್ಟಿರುವುದಾಗಿ ಥಾಮಸ್ ತಿಳಿಸಿದರು.
ಕೋಲ್ಕತಾದ ತ್ರಿಶೂರ್ ಇಂಜಿನಿಯರಿಂಗ್ ಕಾಲೇಜ್‌ನಿಂದ ಬಿ.ಟೆಕ್ ಮತ್ತು ಪೂನಾದಿಂದ ಎಂ.ಟೆಕ್ ಪದವಿ ಪಡೆದ ಥಾಮಸ್ ಅಗ್ನಿ-III ಕ್ಷಿಪಣಿಯ ಪ್ರಥಮ ಪರೀಕ್ಷಾ ಉಡಾವಣೆಯ ಬಳಿಕ ಅದರ ವೈಫಲ್ಯದ ಕುರಿತು ವಿಶ್ಲೇಷಣೆ ನಡೆಸಿದ್ದರು.
|