ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೈಪುರ: ಕನಿಷ್ಠ 67 ಸಾವು, ಹುಜಿ ಕೈವಾಡ ಶಂಕೆ
ಜೈಪುರ: ಪ್ರವಾಸಿ ತಾಣ, ಪಿಂಕ್ ಸಿಟಿ ಎಂಬ ಖ್ಯಾತಿಯ ಜೈಪುರದ ಎಂಟು ಕಡೆಗಳಲ್ಲಿ ದುಷ್ಕರ್ಮಿಗಳು ನಡೆಸಿದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ , ಜಿಲ್ಲೆಯ 15 ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಲಾಗಿದೆ.

ಮಂಗಳವಾರ ಸಂಜೆ ಸುಮಾರು ಏಳೂವರೆ ಗಂಟೆಯ ಸುಮಾರಿಗೆ ಜನನಿಬಿಡ ಪ್ರದೇಶದ ಎಂಟು ಕಡೆಗಳಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. ಈ ಸ್ಫೋಟದಿಂದ ಕನಿಷ್ಠ 67 ಮಂದಿ ಹತರಾಗಿದ್ದು, 200 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ್ ಸಂಘ್(ಆರ್ಎಸ್ಎಸ್) ಮತ್ತು ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಸೇರಿದಂತೆ ವಿವಿಧ ಸಂಘಟನೆಗಳು ರಾಜಸ್ಥಾನ್ ಬಂದ್‌ಗೆ ಕರೆ ನೀಡಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಕರ್ಫ್ಯೂ ಹೇರಲಾಗಿದೆ. ಕ್ಷಿಪ್ರ ಕ್ರಿಯಾ ಪಡೆ ಹಾಗೂ ಸೇನೆಯು 24 ಗಂಟೆಗಳ ಕಟ್ಟೆಚ್ಚರ ವಹಿಸಿದೆ.

ಏತನ್ಮಧ್ಯೆ, ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಅವರು, ಪರಿಸ್ಥಿತಿಯ ಅವಲೋಕನಕ್ಕಾಗಿ 11 ಗಂಟೆಗೆ ಸಂಪುಟದ ತುರ್ತು ಸಭೆ ಕರೆದಿದ್ದಾರೆ.

ಸ್ಫೋಟದ ಹಿನ್ನೆಲೆಯಲ್ಲಿ ರಾಜಸ್ಥಾನ ಸರಕಾರ ಇಂದು ಸಂತಾಪ ಸೂಚಕ ದಿನವನ್ನಾಗಿ ಆಚರಿಸುತ್ತಿದೆ.

ಹುಜಿ ಕೈವಾಡ ಶಂಕೆ
ಬಂಗ್ಲಾದೇಶ ಮೂಲದ ಹರ್ಕತ್ ಉಲ್-ಜಿಹಾದ್-ಇ-ಇಸ್ಲಾಮಿ(ಹುಜಿ) ಸಂಘಟನೆಯ ಕೈವಾಡ ಶಂಕಿಸಿರುವುದಾಗಿ ಗುಪ್ತಚರ ಮೂಲಗಳು ಹೇಳಿವೆ.
ಪ್ರಮುಖವಾಗಿ ಬಾಂಗ್ಲಾದೇಶದಿಂದ ಕಾರ್ಯಾಚರಣೆ ನಡೆಸುತ್ತಿರುವ ಹುಜಿಯು ರಾಜಸ್ಥಾನದಲ್ಲಿ ತನ್ನ ನೆಲೆಗಳನ್ನು ಸ್ಥಾಪಿಸಲು ಯಶಸ್ವಿಯಾಗಿದ್ದು, ಈ ಹಿಂದೆ ನಡೆದ ಪ್ರಮುಖ ಸ್ಫೋಟಗಳಿಗೆ ಇದು ಕಾರಣವಾಗಿದೆ. ಹೊಸವರ್ಷಾಚರಣೆ ವೇಳೆ ರಾಂಪುರದಲ್ಲಿ ನಡೆಸಲಾಗಿರುವ ಸಿಆರ್‌ಪಿಎಫ್ ಶಿಬಿರದ ಮೇಲಿನ ಸ್ಫೋಟ ಹಾಗೂ ಉತ್ತರ ಪ್ರದೇಶದ ಇತರ ಮೂರು ಕಡೆಗಳಲ್ಲಿ ನಡೆಸಲಾಗಿದ್ದ ಸ್ಫೋಟಗಳಿಗೆ ಹುಜಿ ಕಾರಣವಾಗಿತ್ತು.

ಕಳೆದ 2007ರ ಅಕ್ಟೋಬರ್ 11 ರಂದು ಕ್ಜಾಜಾ ಮೊಹಿಯುದ್ದೀನ್ ಚಿಸ್ತಿ ದರ್ಗಾದಲ್ಲಿ ನಡೆಸಲಾದ ಸ್ಫೋಟದಲ್ಲಿ ಇಬ್ಬರು ಸತ್ತಿದ್ದು ಇತರ 17 ಮಂದಿ ಗಾಯಗೊಂಡಿದ್ದರು. ಈ ವೇಳೆ ಸ್ಫೋಟದ ವಸ್ತುವಾಗಿ ಟ್ರಿ-ನೈಟ್ರೋ ಟೊಲ್ಯೂನ್(ಟಿಎನ್‌ಟಿ) ಅನ್ನು ಬಳಸಲಾಗಿತ್ತು.

ಮಂಗಳವಾರದ ಸ್ಫೋಟದಲ್ಲಿಯೂ ಕಬ್ಬಿಣ ಕೊಳವೆಯ ತುಣುಕುಗಳನ್ನು ಚೂರುಗಳನ್ನಾಗಿಸಿ ಬಳಸಲಾಗಿದ್ದು, ಇವುಗಳು ಬಲಿಪಶುಗಳ ದೇಹದಲ್ಲಿ ಚುಚ್ಚಿಕೊಂಡಿತ್ತು. ಅದಲ್ಲದೆ, ಈ ಕುಕೃತ್ಯಕ್ಕಾಗಿ ಹೊಸ ಸೈಕಲ್‌ಗಳನ್ನು ಬಳಸಿರುವುದು ಎರಡೂ ಸ್ಫೋಟಗಳ ಸಾಮ್ಯತೆಯನ್ನು ಸೂಚಿಸುತ್ತದೆ.

ನಿಷೇಧಿತ ಹುಜಿಗೆ ಜೈಶ್-ಇ-ಮೊಹಮ್ಮದ್ ಸಂಘಟನೆಯು ಬೆಂಬಲಿಸಿರುವ ಸಾಧ್ಯತೆಯನ್ನು ಮೂಲಗಳು ತಳ್ಳಿಹಾಕಿಲ್ಲ. ಜೈಶ್ ಸಂಘಟನೆಯು ಪ್ರವಾಸಿ ತಾಣಗಳನ್ನು ಮತ್ತು ಆರ್ಥಿಕ ಹಿತಾಸಕ್ತಿಯ ಸ್ಥಳಗಳಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಲು ಪ್ರಯತ್ನಿಸುತ್ತಿದೆ.
ಮತ್ತಷ್ಟು
ಜೈಪುರದಲ್ಲಿ ಐದು ಸ್ಫೋಟ: ಕನಿಷ್ಠ ಆರು ಸಾವು
ಸಾಕುಪ್ರಾಣಿಗಳಂತೆ ವರ್ತಿಸುವುದನ್ನು ನಿಲ್ಲಿಸಿ: ಕಾಂಗ್ರೆಸ್‌ಗೆ ಬಿಜೆಪಿ 'ಬುದ್ಧಿವಾದ'
ಕ್ಷಿಪಣಿ ಯೋಜನೆಗೆ ಮಹಿಳಾ ಮುಖ್ಯಸ್ಥೆ
'ಮಾನಕಳೆದ' ಇನ್ನೊಬ್ಬ ಮಗಳ ಕೊಲೆ
ಪೂಂಛ್‌: ಸೇನೆಯಿಂದ ಲಷ್ಕರೆ ಉಗ್ರನ ಹತ್ಯೆ
ವಿವಾದಾಸ್ಪದ ಸ್ವಾಮಿ ಅಮೃತ ಚೈತನ್ಯ ಬಂಧನ