ಕನಿಷ್ಠ 70 ಮಂದಿಯ ಸಾವಿಗೆ ಕಾರಣವಾಗಿರುವ ಸ್ಪೋಟಕ್ಕೆ ಸಂಬಂಧಿಸಿದಂತೆ, ಪೊಲೀಸರು ಶಂಕಿತ ಎಂಟು ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಪ್ರಶ್ನೆಗೀಡಾದವರಲ್ಲಿ ಸ್ಫೋಟದಲ್ಲಿ ಗಾಯಗೊಂಡಿರುವ ಒಬ್ಬ ಗಾಯಾಳು ಹಾಗೂ, ಒಬ್ಬ ಸೈಕಲ್ ರಿಕ್ಷಾವಾಲಾನೂ ಸೇರಿದ್ದಾನೆ. ಏತನ್ಮಧ್ಯೆ ಸ್ಫೋಟದಿಂದ ಸಾವನ್ನಪ್ಪಿರುವವರ ಸಂಖ್ಯೆ 85ಕ್ಕೆ ತಲುಪಿದೆ ಎಂದು ಅನಧಿಕೃತ ಮೂಲಗಳು ಹೇಳಿವೆ.
ಸೈಕಲಿನ ಹ್ಯಾಂಡಲ್ ಬಾರ್‌ನಲ್ಲಿ ಇರಿಸಿದ್ದ ಬಾಂಬೊಂದು ಸ್ಫೋಟವಾಗದೆ ಉಳಿದಿದ್ದು, ಬಳಿಕ ಪೊಲೀಸರು ಅದನ್ನು ನಿಷ್ಕ್ರೀಯಗೊಳಿಸಿದ್ದಾರೆ.
ಸ್ಫೋಟ ಸ್ಥಳದಿಂದ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದು, ಈ ವಸ್ತುಗಳನ್ನು ತಾಂತ್ರಿಕ ತಜ್ಞರು ವಿಶ್ಲೇಷಿಸಲಿದ್ದಾರೆ ಎಂದು ಜೈಪುರ ಪೊಲೀಸ್ ಎಸ್ಪಿ ರಾಘವೇಂದ್ರ ಸುಹಾಸ್ ತಿಳಿಸಿದ್ದಾರೆ.
|