ಭಾರತೀಯ ಮುಜಾಹಿದ್ದೀನ್‌ನ 'ಗುರು-ಅಲ್-ಹಿಂದಿ' ಎಂಬ ಉಗ್ರಗಾಮಿ ಸಂಘಟನೆಯು ಮಂಗಳವಾರ ಜೈಪುರದಲ್ಲಿ ನಡೆಸಿರುವ ಭಯೋತ್ಪಾದನಾ ಬಾಂಬ್ ಸ್ಫೋಟದ ಜವಾಬ್ದಾರಿ ವಹಿಸಿಕೊಂಡಿದೆ. ಅಲ್ಲದೆ ರಾಷ್ಟ್ರದಲ್ಲಿ, ಅದರಲ್ಲೂ ವಿಶೇಷವಾಗಿ ರಾಜಸ್ಥಾನದಲ್ಲಿ ಇನ್ನಷ್ಟು ಸ್ಫೋಟಗಳನ್ನು ನಡೆಸುವ ಬೆದರಿಕೆ ಹಾಕಿದೆ.
ಮಂಗಳವಾರದ ವಿಧ್ವಂಸಕ ಕೃತ್ಯದಲ್ಲಿ 80 ಮಂದಿ ಹತರಾಗಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಎರಡು ದೂರದರ್ಶನ ವಾಹಿನಿಗಳಿಗೆ ಇ-ಮೇಲ್ ಸಂದೇಶ ಕಳುಹಿಸಿರುವ ಸಂಘಟನೆಯು ಮಂಗಳವಾರದ ಕುಕೃತ್ಯಕ್ಕೆ ತಾನು ಜವಾಬ್ದಾರಿ ಎಂದಕೊಂಡಿದೆ. ಇ-ಮೇಲ್ ಸ್ವೀಕರಿಸಿರುವ ವಾಹಿನಿಯೊಂದು ಇದನ್ನು ರಾಜಸ್ಥಾನ ಪೋಲಿಸರಿಗೆ ಕಳುಹಿಸಿದೆ ಎನ್ನಲಾಗಿದೆ.
ಜೈಪುರ, ಅಜ್ಮೀರ್ ಮತ್ತು ನಾಥ್ಡವಾರದಂತಹ ಸ್ಥಳಗಳಲ್ಲಿ ಭಯೋತ್ಪಾನಾ ದಾಳಿಯ ಸಾಧ್ಯತೆಯ ಕುರಿತು ಗುಪ್ತಚರ ಏಜೆನ್ಸಿಗಳೂ ಮಾಹಿತಿ ನೀಡಿವೆ ಎಂದು ವರದಿಗಳು ತಿಳಿಸಿವೆ.
|