ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಪಿಐ(ಎಂ) ಸುರ್ಜಿತ್ ಆಸ್ಪತ್ರೆಗೆ ದಾಖಲು  Search similar articles
ಹಿರಿಯ ಕಮ್ಯುನಿಸ್ಟ್ ನಾಯಕ ಹರ್‌ಕಿಶನ್ ಸಿಂಗ್ ಸುರ್ಜಿತ್(92) ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲಿದ್ದು ಅವರನ್ನು ಇಲ್ಲಿನ ಮೆಟ್ರೋ ಆಸ್ಪತ್ರೆಗೆ ಸೇರಿಸಲಾಗಿದೆ.
"ಸುರ್ಜಿತ್ ಅವರು ಉಸಿರಾಟದ ತೊಂದರೆಯಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರನ್ನು ತುರ್ತುನಿಘಾ ಘಟಕದಲ್ಲಿ ಇರಿಸಲಾಗಿದ್ದರೂ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಅವರ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ ಎಂಬ ಆಶಾಭಾವವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ" ಎಂದು ಸಿಪಿಐ(ಎಂ) ಪಕ್ಷದ ಹೇಳಿಕೆ ತಿಳಿಸಿದೆ.

ಸುರ್ಜಿತ್ ಅವರು ಕಳೆದೊಂದು ವರ್ಷಗಳಿಂದಲೂ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದ್ದಾರೆ. ವೆಂಟಿಲೇಟರ್‌ನಲ್ಲಿ ಇರುವ ಎಲ್ಲ ರೋಗಿಗಳ ಸ್ಥಿತಿ ಗಂಭೀರವಾಗಿಯೇ ಇರುತ್ತದೆ. ಆದೇನೆ ಇದ್ದರೂ ಸುರ್ಜಿತ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಪ್ರಧಾನ ನಿರ್ದೇಶಕ ಡಾ|ಪುರುಷೋತ್ತಮ ಹೇಳಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹಾಗೂ ಪೋಲಿಟ್ ಬ್ಯೂರೋ ಸದಸ್ಯ ಎಸ್.ಆರ್.ಪಿಳ್ಳೈ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಪಕ್ಷದ 19ನೆ ಕಾಂಗ್ರೆಸ್‌ನಲ್ಲಿ ಪ್ರಥಮ ಬಾರಿಗೆ ಅವರನ್ನು ಪಾಲಿಟ್ ಬ್ಯೂರೋದಿಂದ ಹೊರಗಿಡಲಾಗಿದೆ. ಬದಲಿಗೆ ಅವರಿಗೆ ಕೇಂದ್ರೀಯ ಸಮಿತಿಯ ವಿಶೇಷ ಆಹ್ವಾನಿತರೆಂಬ ಪದನಾಮ ನೀಡಲಾಗಿದೆ.
ಮತ್ತಷ್ಟು
ಜೈಪುರ: ಸೈಬರ್ ಕೆಫೆ ಮಾಲಕನ ಬಂಧನ
ನ್ಯಾಯಾಧೀಶರ ಆಸ್ತಿ ಘೋಷಣೆ ಪಿಐಎಲ್ ವಜಾ
ಟಿಕೆಟ್: ಬಸ್‌ನಿಂದ ತಳ್ಳಲ್ಪ್ಟಟ್ಟ ತಂದೆ-ಮಗಳು ಸಾವು
ಮಾಯಾ ಕಾರಿಡಾರ್ ಪ್ರಕರಣಕ್ಕೆ ತಾತ್ಕಾಲಿಕ ತಡೆ
ಸ್ಫೋಟದ ಜವಾಬ್ದಾರಿ ಒಪ್ಪಿಕೊಂಡ ಗುರು-ಅಲ್-ಹಿಂದಿ
ಜೈಪುರ: ಶಂಕಿತನ ಸ್ಕೆಚ್ ಬಿಡುಗಡೆ