ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರತೀಯ ಮುಜಾಹಿದೀನ್ ಎಂದು ಹೇಳಿಕೊಂಡು ಬುಧವಾರ ಕಳುಹಿಸಿಕೊಟ್ಟ ವೀಡಿಯೋ ನಕಲಿ ಅಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವೀಡಿಯೋ ಕ್ಲಿಪ್‌ನಲ್ಲಿ ತೋರಿಸಿದ ಸೈಕಲ್‌ನ ಫ್ರೇಮ್ ಸಂಖ್ಯೆ ಹಾಗೂ ಛೋಟಿ ಚೌಪಡ್ ಕೋತ್ವಾಲಿಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಬಳಸಿದ ಸೈಕಲ್‌ನ ಫ್ರೇಮ್ ಸಂಖ್ಯೆ ಒಂದೇ ರೀತಿಯಾಗಿದೆ ಎಂಬುದು ದೃಢಪಟ್ಟಿರುವುದಾಗಿ ಅದು ಹೇಳಿದೆ.
ಮಾಧ್ಯಮಗಳಿಗೆ ಕಳುಹಿಸಿದ ಇ-ಮೇಲ್‌ನಲ್ಲಿ, ವೀಡಿಯೋ ಕ್ಲಿಪ್‌ನಲ್ಲಿದ್ದ ಸೈಕಲ್‌ನ ಫ್ರೇಮ್ ಸಂಖ್ಯೆಯನ್ನೂ ತಿಳಿಸಿತ್ತು ಮತ್ತು ಅದನ್ನು ಛೋಟಿ ಚೌಪಡ್ ಕೋತ್ವಾಲಿಯಲ್ಲಿ ಸ್ಫೋಟಕ್ಕೆ ಬಳಸಲಾಗಿತ್ತು ಎಂದು ಮುಜಾಹಿದೀನ್ ಸಂಘಟನೆ ಹೇಳಿಕೊಂಡಿತ್ತು.
ವೀಡಿಯೋ ಸಹಿತ ಕಳುಹಿಸಲಾಗಿದ್ದ ಇ-ಮೇಲ್ ಬಗ್ಗೆ ಹಲವರು ಪ್ರತಿಕ್ರಿಯಿಸಿ, ಇದು ತನಿಖೆಯ ದಾರಿ ತಪ್ಪಿಸಲು ಉಗ್ರಗಾಮಿಗಳ ಪ್ರಯತ್ನವಿರಬಹುದು ಎಂದು ಹೇಳಿದ್ದರು. ದೆಹಲಿಯ ಸಾಹಿಬಾಬಾದ್‌ನ ಸೈಬರ್ ಕೆಫೆಯಿಂದ ಇ-ಮೇಲ್ ಕ್ಲಿಪ್ ಕಳುಹಿಸಲಾಗಿತ್ತು.
|