ಭೂತಾನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಥಮ ವಿಶ್ವನಾಯಕ ಎಂಬ ಖ್ಯಾತಿ ಪಡೆದ ಪ್ರಧಾನಿ ಮನಮೋಹನ್ ಸಿಂಗ್, ದಕ್ಷಿಣ ಏಷ್ಯಾವನ್ನು ಹೆಚ್ಚು ಸುಭದ್ರ ಮತ್ತು ಅಭ್ಯುದಯಯುತನ್ನಾಗಿ ಮಾಡುವಲ್ಲಿ ಸಹಾಯ ಹಸ್ತ ನೀಡಲು ಭಾರತ ಸಿದ್ಧ ಎಂದು ಶನಿವಾರ ಹೇಳಿದರು.
ಭೂತಾನ್‌ಗೆ ಎರಡು ದಿನಗಳ ಭೇಟಿ ನೀಡಿರುವ ಮನಮೋಹನ್ ಸಿಂಗ್, ಸ್ಥಿರತೆ ಮತ್ತು ಬೆಂಬಲದ ಅಂಶವಾಗಿ ಭಾರತವು ಭೂತಾನನ್ನು ಬೆಂಬಲಿಸುತ್ತದೆ ಎಂದು ನುಡಿದರು. ಮನಮೋಹನ್ ಸಿಂಗ್, ಮಾರ್ಚ್ ತಿಂಗಳಲ್ಲಿ ಭೂತಾನ್‌ನಲ್ಲಿ ನಡೆದ ಐತಿಹಾಸಿಕ ಚುನಾವಣೆಯ ಬಳಿಕ ಪ್ರಜಾಪ್ರಭುತ್ವ ಪಥದಲ್ಲಿ ಸಾಗುತ್ತಿರುವ ಭೂತಾನ್‌ಗೆ, ವಿಶ್ವದಲ್ಲಿಯೇ ಭೇಟಿ ನೀಡಿದ ಪ್ರಥಮ ನಾಯಕರಾಗಿದ್ದಾರೆ.
"ದಕ್ಷಿಣ ಏಷ್ಯಾವು ತನ್ನಷ್ಟಕೆ ಶಾಂತಿ ಹೊಂದುವುದನ್ನು ಕಾಣಲು ಭಾರತ ಇಚ್ಛಿಸುತ್ತದೆ, ಭದ್ರತಾ ವಲಯಗಳ ವಿಸ್ತರಣೆ ಮತ್ತು ಶಾಂತಿ ಮತ್ತು ಅಭ್ಯುದಯಕ್ಕಾಗಿ ಕೊಡುಗೆ ನೀಡಲು ನಾವು ಇಚ್ಛಿಸುತ್ತೇವೆ" ಎಂದು ಅವರು ನುಡಿದರು.
|