ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಲಿತ ಹುಡುಗನಿಗೆ ನಾಸಾ ಕರೆ; ಅಡ್ಡಿಯಾದ ಹಣದ ಹೊರೆ  Search similar articles
ದಲಿತ ಹುಡುಗನೊಬ್ಬನ ಚುರುಕು ಬುದ್ಧಿಯಿಂದ ಪ್ರಭಾವಿತಗೊಂಡಿರುವ ನಾಸಾ, ಆತನನ್ನು ತನ್ನ ಸಂಶೋಧನಾ ತಂಡದಲ್ಲಿ ಸೇರಿಕೊಳ್ಳುವಂತೆ ಆಹ್ವಾನ ನೀಡಿದೆ. ಆದರೆ ಕೊಲೆರೊಡೊ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಗೆ ತೆರಳಲು ಈತನಿಗೀಗ ಹಣಕಾಸು ಸಮಸ್ಯೆ ಅಡ್ಡಿಯಾಗಿದೆ.

ಶ್ರೀಧರ್ ಕಾಂಬ್ಲೆ ಎಂಬ 17ರ ಹರೆಯದ ತರುಣ ತನ್ನ ನಕ್ಷತ್ರಗುಚ್ಛಗಳ ವಿಕಸನ(ಗೆಲಾಕ್ಸಿ ಎವಲ್ಯೂಶನ್) ಕುರಿತು ಮಂಡಿಸಿದ ಸಿದ್ಧಾಂತ ಪ್ರಬಂಧವು ನಾಸಾ ವಿಜ್ಞಾನಿಗಳ ಮೇಲೆ ಪ್ರಭಾವ ಬೀರಿದೆ. ಪರಿಣಾಮ ಗೆಲಾಕ್ಸಿ ಎವಲ್ಯೂಶನ್ ಎಕ್ಸ್‌ಪ್ಲೋರರ್ ಪ್ರಾಜೆಕ್ಟ್‌ನಲ್ಲಿ ಕಿರಿಯ ಸಂಶೋಧನಾ ವಿಜ್ಞಾನಿಯಾಗಿ ಕಾರ್ಯವೆಸಗಲು ಆತನಿಗೆ ಆಹ್ವಾನ ನೀಡಿದ್ದಾರೆ.

ನಾಸಾ ವಿಜ್ಞಾನಿಗಳು ಕೊಲೊರಡೊ ವಿಶ್ವವಿದ್ಯಾನಿಲಯದಲ್ಲಿ ಖಗೋಳಶಾಸ್ತ್ರ ಅಧ್ಯಯನ ನಡೆಸಲು 10 ಸಾವಿರ ಡಾಲರ್ ವಿದ್ಯಾರ್ಥಿ ವೇತನವನ್ನೂ ನೀಡುವುದಾಗಿ ಹೇಳಿದ್ದಾರೆ. ಆದರೆ ಒಟ್ಟು ವೆಚ್ಚವು ಸುಮಾರು 50 ಸಾವಿರ ಡಾಲರ್ ಆಗುವ ಕಾರಣ ಈ ಆಹ್ವಾನವನ್ನು ಸ್ವೀಕರಿಸುವುದು ಶ್ರೀಧರ್‌ಗೆ ಸಂಕಷ್ಟಕ್ಕೀಡು ಮಾಡಿದೆ.

ಬಡತನದ ತನ್ನ ಕುಟುಂಬವು ಇಷ್ಟುದೊಡ್ಡ ಮೊತ್ತವನ್ನು ಭರಿಸಲಾರದು ಎಂದು ಹೇಳುವ ಶ್ರೀಧರ್, ಪ್ರಾಯೋಜಕರಿಗಾಗಿ ಎದುರು ನೋಡುತ್ತಿದ್ದಾನೆ.
ಮತ್ತಷ್ಟು
ದ.ಏಷ್ಯಾ ಸುಭದ್ರತಾ ಸಹಾಯಕ್ಕೆ ಭಾರತ ಸಿದ್ಧ: ಸಿಂಗ್
ಭಾರತ-ಪಾಕ್ ಗಡಿಯಲ್ಲಿ ಹೆಚ್ಚಿನ ಪಡೆಗಳ ನಿಯೋಜನೆ
ಕೋಟಾ: ಹೈಕೋರ್ಟ್ ತಡೆಯಾಜ್ಞೆ ಸುಪ್ರೀಂ ಕೋರ್ಟ್ ತೆರವು
ಸ್ಫೋಟ ಶಂಕಿತನ ನೋಡಿದ್ದೆ: ಉದಯಪುರ ಹೋಟೆಲ್ ಮಾಲೀಕ
ಹರಕಿಶನ್ ಸಿಂಗ್ ಸುರ್ಜೀತ್ ಸ್ಥಿತಿ ಚಿಂತಾಜನಕ
ಜೈಪುರ ಸ್ಫೋಟ: ಇ-ಮೇಲ್ ವೀಡಿಯೋ ನಕಲಿ ಅಲ್ಲ