ಶ್ರೀನಗರ: ಪುಲ್ವಾಮ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಸಂಭವಿಸಿರುವ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.
ಇಲ್ಲಿಂದ 45 ಕಿಲೋ ಮೀಟರ್ ದೂರದಲ್ಲಿರುವ ಲುರ್ಗಾಮ್-ಟ್ರಾಲ್ ಗ್ರಾಮದಲ್ಲಿ ಸೇನೆ ಹಾಗೂ ಸಿಆರ್‌ಪಿಎಫ್ ನೆರವಿನೊಂದಿಗೆ ಪೊಲೀಸರು ನಡೆಸಿರುವ ಕ್ಷಿಪ್ರ ಕಾರ್ಯಾಚರಣೆಯ ಮೇಳೆ ಗುಂಡಿನ ಚಕಮಕಿ ನಡೆದಿದೆ.
ಮನೆಯೊಂದರೊಳಗೆ ಅವಿತುಕೊಂಡಿದ್ದ ಉಗ್ರರು, ಪೊಲೀಸರ ದಾಳಿಯ ವೇಳೆಗೆ, ತಾವು ಸಿಕ್ಕಿಹಾಕಿಕೊಂಡಿದ್ದೇವೆಂದು ಅರಿವಾದ ತಕ್ಷಣ ಗುಂಡುಹಾರಿಸಲಾರಂಭಿಸಿದ್ದರು. ಉಭಯ ಬಣಗಳ ನಡುವಿನ ಭಾರೀ ಕಾಳಗದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
|