ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೈಪುರ ಸ್ಫೋಟ: ಶಾಂತಿ ಪ್ರಕ್ರಿಯೆಗೆ ಧಕ್ಕೆ: ಪ್ರಧಾನಿ  Search similar articles
ಜೈಪುರ್‌ನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮನ್ ಮೋಹನ್ ಸಿಂಗ್ ಅವರು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಶಾಂತಿ ಪ್ರಕ್ರಿಯೆಗಳನ್ನು ಹಾಳುಗೆಡುವ ಭಯೋತ್ಪಾದಕರ ಷಡ್ಯಂತ್ರ ಇದು ಎಂದು ಹೇಳಿದ್ದಾರೆ.

ಭಯೋತ್ಪಾದಕರ ಷಡ್ಯಂತ್ರಗಳನ್ನು ನಾಶ ಮಾಡುವುದಕ್ಕೆ ವ್ಯವಸ್ಥಿತವಾದ ತಂತ್ರವನ್ನು ಉಭಯ ರಾಷ್ಟ್ರಗಳು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

ಮೇ 20-21ರಂದು ಭಾರತ ಮತ್ತು ಪಾಕ್ ನಡುವೆ ನಡೆಯಲಿರುವ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳ ಮಾತುಕತೆಗೆ ಅಡ್ಡಿ ಪಡಿಸುವ ನಿಟ್ಟಿನಲ್ಲಿ ಭಯೋತ್ಪಾದಕರು ಜೈಪುರ್ ಸರಣಿ ಬಾಂಬ್ ಸ್ಫೋಟಕ್ಕೆ ಕೈಹಾಕಿರಬಹುದೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಜೈಪುರ್ ಅದೇ ಉದ್ದೇಶ ಇಟ್ಟುಕೊಂಡು ಮಾಡಲಾಗಿದೆ ಎನ್ನುವ ಅರ್ಥದಲ್ಲಿ ಹೇಳಿದರು.

ಮೇ 20 ರಂದು ಎರಡು ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಯಲಿದ್ದು, 21 ರಂದು ವಿದೇಶಾಂಗ ಸಚಿವರ ಮಟ್ಟದಲ್ಲಿ ದ್ವಿಪಕ್ಷೀಯ ಸಭೆ ಏಳು ತಿಂಗಳ ನಂತರ ನಡೆಯುತ್ತಿದೆ.
ಮತ್ತಷ್ಟು
ಕೋಮಾಗೆ ಜಾರಿದ ಕಮ್ಯುನಿಸ್ಟ್ ನಾಯಕ ಸುರ್ಜಿತ್
ಸ್ಫೋಟ: ಶಂಕಿತ ಸಿಮಿ ಸದಸ್ಯನ ಬಂಧನ
ಶ್ರೀನಗರ: ಗುಂಡಿನ ಚಕಮಕಿಗೆ 3 ಉಗ್ರರ ಬಲಿ
ದಲಿತ ಹುಡುಗನಿಗೆ ನಾಸಾ ಕರೆ; ಅಡ್ಡಿಯಾದ ಹಣದ ಹೊರೆ
ದ.ಏಷ್ಯಾ ಸುಭದ್ರತಾ ಸಹಾಯಕ್ಕೆ ಭಾರತ ಸಿದ್ಧ: ಸಿಂಗ್
ಭಾರತ-ಪಾಕ್ ಗಡಿಯಲ್ಲಿ ಹೆಚ್ಚಿನ ಪಡೆಗಳ ನಿಯೋಜನೆ