ಉಲ್ಫಾ ಸಂಘಟನೆಯ ಪ್ರಮುಖ ನಾಯಕ ಉತ್ಪಲ್ ನಿಯೋಗ್ ಎಂಬಾತ, ಕಾಕೊಪತರ್ ಎಂಬಲ್ಲಿ ಸೇನೆಯೊಂದಿಗೆ ನಡೆಸಿರುವ ಗುಂಡಿನಚಕಮಕಿಯಲ್ಲಿ ಕಳೆದ ರಾತ್ರಿ ಸಾವಿಗೀಡಾಗಿದ್ದಾನೆ.
ಸೇನೆಯ ಗಸ್ತು ತಂಡದ ಕಣ್ಣಿಗೆ ಬಿದ್ದ ಉಗ್ರರು ಪರಾರಿಯಾಗಲು ಯತ್ನಿಸಿದ ವೇಳೆ, ಉಭಯ ತಂಡದೊಳಗೆ ಗುಂಡಿನ ಕಾದಾಟ ನಡೆದಿದ್ದು, ಪರಿಣಾಮ ನಿಯೋಗ್ ಹತನಾಗಿದ್ದಾನೆ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ಹತನಾದ ಉಗ್ರನ ಬಳಿಯಿದ್ದ ಒಂದು ಅಮೆರಿಕ ನಿರ್ಮಿತ ಪಿಸ್ತೂಲು, ಮೂರು ತೋಟಾಗಳು ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
|