ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಸಿಎಸ್ಇ ಪರೀಕ್ಷಾ ಫಲಿತಾಂಶ ಪ್ರಕಟ  Search similar articles
ಪ್ರೌಢಶಿಕ್ಷಣಕ್ಕಾಗಿ ಭಾರತೀಯ ಮಂಡಳಿ (ಐಸಿಎಸ್ಇ)ಯು ಹತ್ತು ಮತ್ತು ಹನ್ನೆರಡನೆ ತರಗತಿಗಾಗಿ ನಡೆಸಿರುವ ಪರೀಕ್ಷೆಯ ಫಲಿತಾಂಶವು ಮಂಗಳವಾರ ಪ್ರಕಟಗೊಂಡಿದೆ. ಹತ್ತನೆ ತರಗತಿಯಲ್ಲಿ ಶೇ.98.04 ಹಾಗೂ ಹನ್ನೆರಡನೆ ತರಗತಿಯಲ್ಲಿ ಶೇ.97.04ರಷ್ಟು ಫಲಿತಾಂಶ ದಾಖಲಾಗಿದೆ.

ಈ ಪರೀಕ್ಷೆಯಲ್ಲೂ ಬಾಲಕಿಯರು ಬಾಲಕರನ್ನು ಹಿಂದಿಕ್ಕಿದ್ದಾರೆ. ಉಭಯ ತರಗತಿಗಳ ಈ ಬಾರಿಯ ಫಲಿತಾಂಶಗಳ ಶೇಕಡಾವಾರಿನಲ್ಲಿ 0.08ರಷ್ಚು ಹೆಚ್ಚಳವಾಗಿದೆ.

ಹತ್ತನೆ ತರಗತಿಯಲ್ಲಿ ಶೇ.98.63 ಹಾಗೂ ಹನ್ನೆರಡನೆ ತರಗತಿಯಲ್ಲಿ ಶೇ.98.23 ಬಾಲಕಿಯರು ತೇರ್ಗಡೆ ಹೊಂದಿದ್ದಾರೆ. ಬಾಲಕರು ಅನುಕ್ರಮವಾಗಿ ಶೇ97.57 ಮತ್ತು 96.10 ಫಲಿತಾಂಶ ದಾಖಲಿಸಿದ್ದಾರೆ.

ಥಾಣೆಯ ಶ್ರೀಮತಿ ಸುಲೋಚನಾ ದೇವಿ ಸಿಂಗಾನಿಯಾ ಶಾಲೆಯ ಜಾನಕಿ ಕಿರಿಟ್ ಸೇತ್ ಮತ್ತು ವಾರಣಾಸಿಯ ಸೈಂಟ್ ಜೋಸೆಫ್ ಕಾನ್ವೆಂಟಿನ ಶೃತಿ ಸಿಂಗ್ ಅವರುಗಳು ಶೇ.98.6 ಅಂಕ ಗಳಿಸಿದ್ದು ಹತ್ತನೆ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಹನ್ನೆರಡನೆ ತರಗತಿಯಲ್ಲಿ ಡೆಹ್ರಾಡೂನ್‌ನ ಡೂನ್ ಶಾಲೆಯ ಗೌರವ್ ಸೂದ್ ಶೇ.99 ಅಂಕಗಳಿಸಿ ಪ್ರಥಮ ಸ್ಥಾನಗಳಿಸಿದ್ದಾನೆ.
ಮತ್ತಷ್ಟು
ಭಯೋತ್ಪಾದನೆಗೆ ಬಿಜೆಪಿಯೇ ಕಾರಣ: ಸಿಬಾಲ್
ಯುಪಿ: ಸೈಕಲ್ ಖರೀದಿಗೆ ಕಟ್ಟುನಿಟ್ಟಿನ ಕ್ರಮ
ಜರ್ದಾರಿ, ಶರೀಫ್‌ರನ್ನು ಭೇಟಿ ಮಾಡಲಿರುವ ಪ್ರಣಬ್
ಬಾರಕ್ ಕ್ಷಿಪಣಿ ವ್ಯವಹಾರ: ಜಾರ್ಜ್ ತನಿಖೆ
ಪೂಂಛ್ ಗಡಿಯಲ್ಲಿ ಕಾದಾಟ: ಜವಾನ ಸಾವು
ಸೇನಾ ಸಿಬ್ಬಂದಿಗಳ ನೇಮಕಕ್ಕೆ ಆಯ್ಕೆ ಪ್ರಕ್ರಿಯೆ ಅಡ್ಡಿ