ರಾಜೀವ್ ಗಾಂಧಿ ಹತ್ಯಾಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮೂವರು ಕೈದಿಗಳು, ತಮ್ಮನ್ನು ತಾವೇ ರಾಜಕೀಯ ಕೈದಿಗಳೆಂದು ಬಣ್ಣಿಸಿಕೊಂಡಿದ್ದು, ಶೀಘ್ರ ಬಿಡುಗಡೆ ಕೋರಿ ಮಾವವ ಹಕ್ಕುಗಳ ನ್ಯಾಯಾಲಯದ ವಿಶೇಷ ಅಭಿಯೋಜಕರನ್ನು ವಿನಂತಿಸಿಕೊಂಡಿದ್ದಾರೆ.
ಎಸ್. ಜಯಕುಮಾರ್, ರಾಬರ್ಟ್ ಪಯಾಸ್ (ಇವರಿಬ್ಬರು ಶ್ರೀಲಂಕಾದವರು) ಹಾಗೂ ಪಿ.ರವಿಚಂದ್ರನ್ ಅವರುಗಳು ಬರೆದಿರುವ ಈ ಪತ್ರಕ್ಕೆ, ತನ್ನ ಅಭಿಪ್ರಾಯವನ್ನು ಸೇರಿಸಿ ಪ್ರಧಾನಿ, ರಾಷ್ಟ್ರಪತಿ ಹಾಗೂ ಮಾನವಹಕ್ಕುಗಳ ಆಯೋಗಕ್ಕೆ ಕಳುಹಿಸುವುದಾಗಿ ವಿಶೇಷ ಅಭಿಯೋಜಕರಾಗಿರುವ ವಿ.ಕಣ್ಣದಾಸನ್ ಹೇಳಿದ್ದಾರೆ.
ಆದರೆ ಈ ಕುರಿತು ತನ್ನ ಶಿಫಾರಸ್ಸು ಏನೆಂಬುದನ್ನು ಕಣ್ಣದಾಸನ್ ಹೊರಗೆಡವಲಿಲ್ಲ.
ಜೈಲು ಕಾಯ್ದೆ ನಿಬಂಧನೆಗಳಿಗೆ ಅಪ್ರಕೃತವಾದ ಕಾರಣ ಶೀಘ್ರ ಬಿಡುಗಡೆ ಕೋರಿ ಸಲ್ಲಿಸಲಾಗಿರುವ ತಮ್ಮ ಮನವಿಗಳನ್ನು ನಿರಾಕರಿಸಲಾಗಿದೆ ಎಂದು ಕೈದಿಗಳು ಹೇಳಿದ್ದಾರೆ.
ಜೈಲುಗಳಲ್ಲಿ ಅಪರಾಧಿಗಳ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದನ್ನು ಎತ್ತಿತೋರಿರುವ ಕಣ್ಣದಾಸನ್ ಅವರ ಪ್ರಯತ್ನವನ್ನು ಕೈದಿಗಳು ಶ್ಲಾಘಿಸಿದ್ದು, ಕಳೆದ 17 ವರ್ಷಗಳಿಂದ ಜೈಲುವಾಸದಲ್ಲಿರುವ, ತಮ್ಮ ಗುಣನಡೆತೆ ಉತ್ತಮವಾಗಿದೆ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ರಾಜೀವ್ ಹತ್ಯಾಪ್ರಕರದಲ್ಲಿ ನಳಿನಿ, ಮುರುಗನ್, ಸಂತಾನ್ ಮತ್ತು ಎ.ಜಿ.ಪೆರಾರಿವಲನ್ ಅವರುಗಳೊಂದಿಗೆ ಈ ಮೂವರನ್ನೂ ದೋಷಿಗಳೆಂದು ನ್ಯಾಯಾಲಯ ಪರಿಗಣಿಸಿದೆ.
|