ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕಮ್ಯೂನಿಸ್ಟ್ ನಾಯಕ ಹರ್‌ಕಿಶನ್ ಸಿಂಗ್ ಸುರ್ಜಿತ್ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ವ್ಯವಸ್ಥೆಯನ್ನು ತೆರವುಗೊಳಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
"ಆವರ ಸ್ಥಿತಿ ಗಂಭೀರವಾಗಿಯೇ ಇದ್ದರೂ ಕೊಂಚ ಸುಧಾರಣೆ ಕಂಡಿದೆ. ಮಂಗಳವಾರ ಪೂರ್ತಿ ಅವರು ವೆಂಟಿಲೇಟರ್ ರಹಿತವಾಗಿಯೇ ಇದ್ದರು. ಅವರಿಗೆ ಇತರ ಔಷಧಿ ಅಥವಾ ಇನ್ಯಾವುದೇ ಯಾಂತ್ರಿಕ ಬೆಂಬಲ ನೀಡಿಲ್ಲ. ಆದರೂ ಅವರು ಆಮ್ಲಜನಕ ಪರಿಪೂರ್ಣತೆಯನ್ನು ಹೊಂದಿದ್ದಾರೆ. ಆವರು ಆಸ್ಪತ್ರೆಗೆ ದಾಖಲಾದ ಬಳಿಕ ಇದು ಅವರ ಆರೋಗ್ಯ ಸ್ಥಿತಿಯಲ್ಲಿ ಕಂಡುಬಂದ ಬಹುದೊಡ್ಡ ಸುಧಾರಣೆಯಾಗಿದೆ" ಎಂದು ಆಸ್ಪತ್ರೆಯ ಆಡಳಿತ ನಿರ್ವಹಣಾಧಿಕಾರಿ ಡಾ|ಪುರುಷೋತ್ತಮ್ ಲಾಲ್ ಹೇಳಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಅನುಭಕ್ಕೀಡಾಗಿದ್ದ ಸುರ್ಜಿತ್ ಅವರನ್ನು ಮೇ ಆರರಂದು ಇಲ್ಲಿನ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ.
|