ಸೋಮವಾರದಂದು ಪೂಂಚ್ ಗಡಿಯಲ್ಲಿ ಪಾಕಿಸ್ತಾನ ಸಶಸ್ತ್ರ ಸೇನಾ ಪಡೆಯು ಸ್ವಯಂಪ್ರೇರಿತವಾಗಿ ಗುಂಡಿನ ಚಕಮಕಿ ನಡೆಸಿರುವುದರ ವಿರುದ್ಧ ಭಾರತೀಯ ಸೇನಾಪಡೆಯು ದೂರು ದಾಖಲಿಸಿದೆ.
ಕದನ ವಿರಾಮವನ್ನು ತಾನು ಕಾಪಾಡಿಕೊಳ್ಳಲು ಬದ್ಧ ಎಂದು ಪಾಕಿಸ್ತಾನ ಭರವಸೆ ನೀಡಿದ ನಂತರ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ರೋಶ್ನಿ ಎಂಬಲ್ಲಿ ಉಭಯ ಪಕ್ಷದ ಸೇನಾಧಿಕಾರಿಗಳು ಪ್ಲ್ಯಾಗ್ ಮೀಟಿಂಗ್ ನಡೆಸಿದರು. ಈ ಸಂದರ್ಭದಲ್ಲಿ ಜಾರಿಯಲ್ಲಿ ಇರುವ ಕದನ ವಿರಾಮದ ಉಲ್ಲಂಘನೆಯನ್ನು ಪಾಕಿಸ್ತಾನದ ಸೇನಾಪಡೆಗಳು ಮಾಡಿವೆ ಎಂದು ಭಾರತೀಯ ಸೇನಾ ಪಡೆ ದೂರು ನೀಡಿತು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಎಸ್. ಡಿ. ಗೋಸ್ವಾಮಿ ಹೇಳಿದರು.
ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಾಲ್ಕನೇ ಸುತ್ತಿನ ಸಮಗ್ರ ಮಾತುಕತೆಗಳು ಇಸ್ಲಾಮಾಬಾದ್‌ನಲ್ಲಿ ಪ್ರಾರಂಭವಾಗಿದ್ದು ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯು ಕದನ ವಿರಾಮ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದೆ.
ಭಾರತೀಯ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಮತ್ತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಷೀರ್ ಅವರ ಮಾತುಕತೆ ನಡೆಸಿದ ಕದನ ವಿರಾಮಕ್ಕೆ ಎರಡು ಪಕ್ಷಗಳು ಆದ್ಯತೆ ನೀಡಿದ್ದು, ಕದನ ವಿರಾಮದ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
|