ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ವಿರುದ್ಧ ಜಂಟಿ ಹೋರಾಟ, ಕದನವಿರಾಮಕ್ಕೆ ಭಾರತ-ಪಾಕ್ ಸಮ್ಮತಿ  Search similar articles
ಭಯೋತ್ಪಾದನೆಯೊಂದು 'ಸಮಾನ ಪಿಡುಗು' ಎಂದು ಬಣ್ಣಿಸಿರುವ ಪಾಕಿಸ್ತಾನವು, ಭಾರತದೊಂದಿಗೆ ಸೇರಿ ಜಂಟಿ ಹೋರಾಟ ನಡೆಸಲು ಒಪ್ಪಿಗೆ ನೀಡಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ ಕದನವಿರಾಮ ಕಾಯ್ದುಕೊಳ್ಳಲು ಬದ್ಧವಾಗಿರುವುದಾಗಿ ಘೋಷಿಸಿದೆ.

ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ವ್ಯವಹಾರಗಳ ಸಚಿವರಾದ ಪ್ರಣಬ್ ಮುಖರ್ಜಿ ಮತ್ತು ಶಾ ಮಹಮೂದ್ ಖುರೇಶಿ ನಡುವೆ ಬುಧವಾರ ನಡೆದ ಮಾತುಕತೆ ಸಂದರ್ಭ, ಕಾಶ್ಮೀರ, ಸಿಯಾಚಿನ್ ಮತ್ತು ಸರ್ ಕ್ರೀಕ್ ವಿವಾದಗಳ ಕುರಿತ ಬೆಳವಣಿಗೆಗಳನ್ನು ಚರ್ಚಿಸಲಾಯಿತು ಹಾಗೂ ವಿಶ್ವಾಸವೃದ್ಧಿ ಕ್ರಮಗಳನ್ನು ಮುಂದುವರಿಸಲು ನಿರ್ಧರಿಸಲಾಯಿತು.

ಮಾನವೀಯ ನೆಲೆಯಲ್ಲಿ ಉಭಯ ರಾಷ್ಟ್ರಗಳ ಖೈದಿಗಳಿಗೆ ರಾಜತಾಂತ್ರಿಕ ಸಹಾಯ ಲಭ್ಯವಾಗುವಂತೆ ಮಾಡುವ ಒಪ್ಪಂದಕ್ಕೆ ಭಾರತ-ಪಾಕಿಸ್ತಾನ ಸಹಿ ಹಾಕಿದವು.

ಭಯೋತ್ಪಾದನೆಯು ಸಮಾನವಾದ ಪಿಡುಗಾಗಿದ್ದು, ಜಂಟಿಯಾಗಿ ಅದರ ವಿರುದ್ಧ ಹೋರಾಟ ನಡೆಸಲು ನಾವು ಒಪ್ಪಿದೆವು ಎಂದು ಪ್ರಣಬ್ ಜತೆ ನಾಲ್ಕನೇ ಸುತ್ತಿನ ಸಮಗ್ರ ಮಾತುಕತೆಯ ಪರಮಾರ್ಶೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಖುರೇಶಿ ಹೇಳಿದರು. ಮುಂದಿನ ಸುತ್ತಿನ ಮಾತುಕತೆಯನ್ನು ಜುಲೈ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಈ ನಿಟ್ಟಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು 'ನಮ್ಮ ಮೈತ್ರಿಗೆ ಬಾಧಕವಾಗದಂತಾಗಿಸಲು' ಜಂಟಿ ಭಯೋತ್ಪಾದನಾ ನಿರೋಧಕ ತಂತ್ರ (ಜೆಎಟಿಎಂ)ವನ್ನು ಸಕ್ರಿಯಗೊಳಿಸಲಾಗುತ್ತದೆ ಎಂದು ಖುರೇಶಿ ನುಡಿದರು.

ಜೈಪುರದಲ್ಲಿ ನಡೆದ ಬಾಂಬ್ ಸ್ಫೋಟ ಘಟನೆಯನ್ನು 'ಹೃದಯಾಂತರಾಳದಿಂದ' ಪಾಕಿಸ್ತಾನವು ಖಂಡಿಸುವುದಾಗಿ ತಿಳಿಸಿದ ಅವರು, ಗಡಿ ನಿಯಂತ್ರಣ ರೇಖೆಯಲ್ಲಿನ ಉಗ್ರರ ಒಳನುಸುಳುವಿಕೆ ತಡೆಯನ್ನು ಪರಸ್ಪರ ಹಿತಾಸಕ್ತಿಯ ಆಧಾರದಲ್ಲಿ ತಡೆಗಟ್ಟಲಾಗುತ್ತದೆ ಎಂದು ಹೇಳಿದರಲ್ಲದೆ, ಉದ್ವಿಗ್ನತೆ ಕನಿಷ್ಠ ಪ್ರಮಾಣದಲ್ಲಿರುವಂತೆ ಮಾಡಲು ಕದನವಿರಾಮ ಮುಂದುವರಿಯಬೇಕಿದೆ ಎಂದರು.

ಪರಿಪೂರ್ಣವಾಗಿ ಸಂಬಂಧಗಳನ್ನು ಸಾಮಾನ್ಯ ಸ್ಥಿತಿಗೆ ಮರಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಂಗಿತವಿದೆ ಎಂಬುದನ್ನು ಕಂಡುಕೊಂಡಿರುವುದಾಗಿ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್, ಪ್ರಧಾನಿ ಯೂಸುಫ್ ರಾಜಾ ಗಿಲಾನಿ, ಪಿಪಿಪಿ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪಿಎಂಎಲ್ ಮುಖ್ಯಸ್ಥ, ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿ ಮಾಡಿದ ಬಳಿಕ ಪ್ರಣಬ್ ಮುಖರ್ಜಿ ಹೇಳಿದರು.
ಮತ್ತಷ್ಟು
ಗುಂಡಿನ ಚಕಮಕಿ: ಭಾರತೀಯ ಸೇನಾ ಪಡೆಯ ದೂರು
ನನ್ನ ಕೈವಾಡವಿಲ್ಲ: ರಾಕೇಶ್ ತಲ್ವಾರ್
ರಾಜೀವ್ ಗಾಂಧಿ 17ನೆ ಪುಣ್ಯತಿಥಿ
ಸುರ್ಜಿತ್ ವೆಂಟಿಲೇಟರ್ ತೆರವು
ಶೀಘ್ರ ಬಿಡುಗಡೆಗೆ ರಾಜೀವ್ ಹತ್ಯಾ ಆರೋಪಿಗಳ ಮನವಿ
ಗಾವ್ಳಿ ವಿರುದ್ಧ ಇನ್ನೊಂದು ಮೋಕಾ ಕೇಸು