ಪಾಕಿಸ್ತಾನದಲ್ಲಿ ಮರಣ ದಂಡನೆಗೀಡಾಗಿರುವ ಸರಬ್‌ಜಿತ್ ಪ್ರಕರಣ ಹಾಗೂ ಸಂಸತ್ ಭವನದ ಮೇಲೆ ದಾಳಿನಡೆಸಿ ಮರಣ ದಂಡನೆಗೀಡಾಗಿರುವ ಅಫ್ಜಲ್ ಗುರು ಪ್ರಕರಣಕ್ಕೆ ತಳುಕು ಹಾಕಿರುವ ಗೃಹಸಚಿವ ಶಿವರಾಜ್ ಪಾಟೀಲ್, ಅಫ್ಜಲ್ ಗುರುವಿಗೆ ಮರಣದಂಡನೆ ವಿಧಿಸುವಂತೆ ಮತ್ತು ಸರಬ್‌ಜಿತ್‌ನಿಗೆ ಕ್ಷಮಾದಾನ ನೀಡುವಂತೆ ಕೋರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತನ್ನ ಹುಟ್ಟೂರು ಲಾಥೂರ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಸಚಿವರು, ಎರಡು ಪ್ರಕರಣಗಳಿಗೆ ಪರಸ್ಪರ ಸಂಬಂಧ ಕಲ್ಪಿಸಿದ್ದು, "ನೀವು ಅಫ್ಜಲ್ ಗುರುವಿಗೆ ಮರಣದಂಡನೆ ಬಯಸುವಿರಾದರೆ, ಸರಬ್‌ಜಿತ್‌ಗೆ ಯಾಕೆ ಕ್ಷಮೆ ಯಾಚಿಸುತ್ತೀರಿ" ಎಂದು ಪ್ರಶ್ನಿಸಿದರು.
ಎರಡು ದಶಕಗಳಿಗೆ ಹಿಂದೆ ಪಾಕಿಸ್ತಾನದಲ್ಲಿ ನಡೆಸಲಾಗಿರುವ ಬಾಂಬ್‌ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಬ್‌ಜಿತ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಭಾರತೀಯ ಸರಕಾರವು ಕ್ಷಮಾದಾನ ಅರ್ಜಿ ಕಳುಹಿಸಿರುವ ಹಿನ್ನೆಲೆಯಲ್ಲಿ ಆತನನ್ನು ನೇಣುಗಂಭಕ್ಕೇರಿಸುವುದನ್ನು ಸದ್ಯಕ್ಕೆ ಮುಂದೂಡಲಾಗಿದೆ. ಇದೊಂದು ತಪ್ಪುಗುರುತಿಸುವಿಕೆ ಪ್ರಕರಣ ಹಾಗೂ ಆತ ಸ್ಫೋಟಸ್ಥಳದಲ್ಲಿ ಇರಲಿಲ್ಲ ಎಂಬುದು ಆತನಿಗೆ ಕ್ಷಮಾದಾನ ಯಾಚಿಸುವವರ ವಾದ.
ಸಂಸತ್ತಿನ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದಲ್ಲಿನ ಎಲ್ಲಾ ಅಪಸವ್ಯಗಳಿಗೆ ನಾವು ಒಂದು ಸಮುದಾಯವನ್ನು ದೂಷಿಸುವಂತಿಲ್ಲ ಎಂದು ನುಡಿದರು. ರಾಷ್ಟ್ರಪತಿಗಳ ಕ್ಷಮಾದಾನಕ್ಕಾಗಿ ಕಾಯುತ್ತಿರುವ ಅಫ್ಜಲ್ ಗುರು ಮರಣದಂಡನೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಕಾನೂನು ಏನು ಹೇಳುತ್ತದೆಯೂ ಅದನ್ನು ಸರಕಾರ ಅನುಸರಿಸಲಿದೆ ಎಂದು ನುಡಿದರು.
ಬಿಜೆಪಿ ಪ್ರತಿಕ್ರಿಯೆ ಗೃಹಸಚಿವರ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿರುವ ಪ್ರಮುಖ ವಿರೋಧಪಕ್ಷ ಬಿಜೆಪಿ, "ಗೃಹ ಸಚಿವರು ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಅತ್ಯಂತ ಬೇಜವಾಬ್ದಾರಿಯ ವರ್ತನೆ" ಎಂದು ಹೇಳಿದೆ.
ಸಚಿವರ ಈ ಹೇಳಿಕೆಯು, ಸರಕಾರವು ತನ್ನನ್ನು ಪಾಕಿಸ್ತಾನಕ್ಕೆ ಒಪ್ಪಿಸಿದೆ ಕಟುವಾಗಿ ಟೀಕಿಸಿದ್ದಾರೆ.
|