ಹರ್ಯಾಣದ ಮೂರು ಮತ್ತು ಪಂಜಾಬ್‌ನ ಒಂದು ವಿಧಾನ ಸಭಾಕ್ಷೆತ್ರದಲ್ಲಿ ಗುರವಾರ ಉಪಚುನಾವಣೆ ನಡೆಯುತ್ತಿದೆ.
ಯಾವುದೇ ಅನಾಹುತಕಾರಿ ಘಟನೆಯನ್ನು ತಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಬಿಗುಬಂದೋಬಸ್ತ್‌ನಲ್ಲಿ ಮತದಾನ ನಡೆಯುತ್ತಿದೆ.
ಹರ್ಯಾಣದ ಆದಂಪುರ, ಇಂದ್ರಿ ಮತ್ತು ಗೊಹನ ಕ್ಷೇತ್ರಗಳು ಮತ್ತು ಪಂಜಾಬಿನ ದಕ್ಷಿಣ ಅಮೃತಸರದಲ್ಲಿ ಉಪಚುನಾವಣೆಗಳು ನಡೆಯುತ್ತಿವೆ. ಹರ್ಯಾಣದಲ್ಲಿ 81 ಅಭ್ಯರ್ಥಿಗಳು ಹಾಗೂ ಪಂಜಾಬ್‌ನಲ್ಲಿ ನಾಲ್ಕು ಅಭ್ಯರ್ಧಿಗಳು ಕಣದಲ್ಲಿದ್ದಾರೆ.
|