ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿಯನ್ನು ಹಾಡಿ ಹೊಗಳಿದ ಸೋನಿಯಾ  Search similar articles
PTI
ಯುಪಿಎ ಸರಕಾರ ನಾಲ್ಕುವರ್ಷ ಪೂರೈಸಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರನ್ನು ಹೊಗಳಿದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮೈತ್ರಿ ಕೂಟ ಜನ ಬೆಂಬಲ ಪಡೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿಯವರ ಸ್ವಭಾವ ಹೇಗೆಂದರೆ ಅವರು ತಾವು ಮಾತಾಡುವ ಬದಲು ತಮ್ಮ ಕಾರ್ಯ ಮಾತಾಡುವುದನ್ನು ಬಯಸುತ್ತಾರೆ. ಅವರ ಕಾರ್ಯವೈಖರಿ ಎಂತಹುದು ಎಂದು ಅರ್ಥೈಸಲು ಕೆಲವು ಸಮಯ ಬೇಕಾಗುವುದು, ಆದರೆ ಅವರು ಎಂತಹ ಪರಿಣಾಮಕಾರಿ ನಾಯಕನೆಂಬುದನ್ನು ಕಾಲವೇ ತಿಳಿಸುತ್ತದೆ ಎಂದು ಸೋನಿಯಾ ಹೇಳಿದರು.

ಈ ಸಮಾರಂಭದಲ್ಲಿ ಯುಪಿಎಯ ಎಲ್ಲಾ ಮೈತ್ರಿ ಪಕ್ಷದ ಸದಸ್ಯರು ಉಪಸ್ಥಿತರಿದ್ದು, ನಂತರ ಸಮಾಜವಾದಿ ಪಕ್ಷದ ಅಮರ್ ಸಿಂಗ್, ಎಡಪಕ್ಷದ ನಾಯಕರಾದ ಸೀತಾರಾಂ ಯೆಚೂರಿ ಮತ್ತು ಎ.ಬಿ. ಬರ್ಧನ್ ಅವರೂ, ಪ್ರಧಾನಿಯವರು ತಮ್ಮ ರೇಸ್ ಕೋರ್ಸ್ ನಿವಾಸದಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ ಆಡಳಿತಾರೂಢ ಮೈತ್ರಿ ಪಕ್ಷಗಳ ಸಂಸದರನ್ನು ಶ್ಲಾಘಿಸಿದ ಸೋನಿಯಾ, ಅವರು ಸ್ವಹಿತಾಸಕ್ತಿಗೆ ದುಡಿಯದೆ, ಸಾಮೂಹಿಕ ಒಳಿತಿಗಾಗಿ ದುಡಿದಿದ್ದಾರೆ ಮತ್ತು ಜನರಿಂದ ಮತ್ತೊಮ್ಮೆ ಜನಾದೇಶವನ್ನು ಪಡೆಯವಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ನುಡಿದರು.

ಇದೇ ವೇಳೆ ಮಾತನಾಡಿದ ಪ್ರಧಾನಿ, ಸದ್ಯಕ್ಕೆ ಹಣದುಬ್ಬರ ಪ್ರಮುಖ ಕಾಳಜಿ ವಿಷಯವಾಗಿದ್ದು, ತಾವು ತಮ್ಮ ಸಂಪನ್ಮೂಲ ಹಾಗೂ ಹಣಕಾಸುಗಳನ್ನು ವಿವೇಕಯುತವಾಗಿ ನಿಭಾಯಿಸಿ, ಒಟ್ಟಾಗಿ ಕೆಲಸ ಮಾಡುವ ಮೂಲಕ ತಮ್ಮ ದೇಶವನ್ನು ಅಪಾಯದಿಂದ ತಪ್ಪಿಸಬೇಕು ಎಂದು ಕರೆ ನೀಡಿದರು.
ಮತ್ತಷ್ಟು
ರಾಮಸೇತು: ಜೂ.15ಕ್ಕೆ ಸಾಧುಗಳ ಸಭೆ
34 ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು
ಸೋನಿಯಾ ಗಾಂಧಿಗೆ ಕೋರ್ಟ್ ಸಮನ್ಸ್
ಅಂತೂಇಂತೂ 4 ವರ್ಷ ಪೂರೈಸಿತು ಯುಪಿಎ
ಪಂಜಾಬ್, ಹರ್ಯಾಣದಲ್ಲಿ ಉಪಚುನಾವಣೆ
ಅಫ್ಜಲ್‌ ಹಾಗೂ ಸರಬ್‌ಜಿತ್‌ಗೆ ತಳುಕು ಹಾಕಿದ ಗೃಹಸಚಿವ