ಭಾರತವು ಶುಕ್ರವಾರ ಚಂಡೀಪುರದಲ್ಲಿ 150 ರಿಂದ 250ಕಿ.ಮೀ. ದೂರ ನೆಗೆಯಬಲ್ಲ ಖಂಡಾಂತರ ಕ್ಷಿಪಣಿ ಪೃಥ್ವಿಯ ಯಶಸ್ವಿ ಉಡಾವಣೆ ನಡೆಸಿದೆ.
ಇದು ಸುಮಾರು 1000ಕೆಜಿಯಷ್ಟು ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ಸೇನೆಯು ಪೃಥ್ವಿಯ ಪರೀಕ್ಷಾರ್ಥ ಹಾರಾಟ ನಡೆಸಲಾಗಿದ್ದು ಇದು ಯಶಸ್ವಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಪರೀಕ್ಷಾ ಉಡಾವಣೆ ನಡೆಸಿರುವ ಕ್ಷಿಪಣಿಯು 8.56 ಮೀಟರ್ ಉದ್ದವಿದ್ದು, ಒಂದು ಮೀಟರ್ ಅಗಲವಿದ್ದು, ಸುಮಾರು 1000 ಕೆಜಿ ಭಾರದಷ್ಟು ಸ್ಫೋಟಕಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.
ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಘಟನೆಯ ನೆರವಿನೊಂದಿಗೆ ದೇಶಿಯವಾಗಿ ತಯಾರಿಸಲಾಗಿದೆ. ಮೊಬೈಲ್ ತಂತ್ರಜ್ಞಾನದ ಉಡ್ಡಯಕದ ಮುಖೇನ ಇಂದು ಬೆಳಿಗ್ಗೆ ಬಂಗಾಳಕೊಲ್ಲಿಯಿಂದ ಉಡಾಯಿಸಲಾಯಿತು ಎಂದು ಮೂಲಗಳು ತಿಳಿಸಿವೆ.
|