ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಲಮನ್ನಾಗೆ ಮಾರ್ಗದರ್ಶಿ ಸೂತ್ರ ಅಂಗೀಕಾರ  Search similar articles
ನವದೆಹಲಿ: ಕೇಂದ್ರ ಸರಕಾರವು ಘೋಷಿಸಿರುವ 66 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಯೋಜನೆಯನ್ನು ಜಾರಿಗೆ ತರಲು ಮಾರ್ಗದರ್ಶಿ ಸೂತ್ರಗಳನ್ನು ಸಂಪುಟ ಅಂಗೀಕರಿಸಿದೆ. ರೈತರಿಗೆ ಹೊಸಸಾಲ ಪಡೆಯಲು ಅನುಕೂಲವಾಗುವಂತೆ, ಮುಂದಿನ ತಿಂಗಳ ಅಂತ್ಯದೊಳಗಾಗಿ ಈ ಯೋಜನೆಯ ಫಲಾನುಭವಿಗಳ ಪಟ್ಟಿತಯಾರಿಸಲು ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ.

ಫೆಬ್ರವರಿ 29ರ ಬಜೆಟ್‌ನಲ್ಲಿ ಪ್ರಕಟಿಸಿರುವ 60,000 ಕೋಟಿ ಸಾಲಮನ್ನಾವನ್ನು ಮತ್ತೆ ಶೇ.10ರಷ್ಟು ವಿಸ್ತರಿಸಲಾಗಿದ್ದು 66,000 ಕೋಟಿಗೇರಿಸಲಾಗಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಸುಮಾರು 3.69 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಆರು ಮಿಲಿಯ ಇತರ ರೈತರು ಈ ಯೋಜನೆಯಿಂದ ಅನುಕೂಲ ಪಡೆಯಲಿದ್ದಾರೆ.

ಸಣ್ಣ ಮತ್ತು ಅತಿಸಣ್ಣ ರೈತರು ಪಡೆದಿರುವ ನೇರ ಕೃಷಿ ಸಾಲ ಮತ್ತು 'ಇತರ ರೈತರು' ಪರಿಶಿಷ್ಟ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ನಗರ ಸಹಕಾರಿ ಬ್ಯಾಂಕುಗಳು ಮತ್ತು ಸ್ಥಳೀಯ ಪ್ರಾದೇಶಿಕ ಬ್ಯಾಂಕುಗಳು ಸೇರಿದಂತೆ ಸಹಕಾರಿ ಸಾಲ ಸಂಸ್ಥೆಗಳಿಂದ ಪಡೆದಿರುವ ಸಾಲಗಳನ್ನು ಈ ಯೋಜನೆಯು ವ್ಯಾಪಿಸುತ್ತದೆ.

ಮಾರ್ಗದರ್ಶಿ ಸೂತ್ರದ ಪ್ರಕಾರ, ಅತಿ ಸಣ್ಣ ರೈತರು ಅಂದರೆ ಒಂದು ಹೆಕ್ಟೇರ್(2.5 ಎಕರೆ) ಜಾಗದಲ್ಲಿ ಕೃಷಿ(ಮಾಲಕ, ಗೇಣಿದಾರ ಅಥವಾ ಪಾಲುದಾರ ಕೃಷಿಕ) ನಡೆಸುವ ರೈತ. ಸಣ್ಣ ರೈತ ಅಂದರೆ, ಒಂದು ಹೆಕ್ಟೇರ್‌ಗಿಂತ ಅಧಿಕ ಮತ್ತು ಎರಡು ಹೆಕ್ಟೇರುಗಳಷ್ಟು ಜಾಗ ಹೊಂದಿದವರು.
ಮತ್ತಷ್ಟು
ಖಂಡಾಂತರ ಕ್ಷಿಪಣಿ ಪೃಥ್ವಿಯ ಯಶಸ್ವಿ ಪರೀಕ್ಷೆ
ನೋಯ್ಡಾ: ಅರುಷಿ ತಂದೆ ಬಂಧನ
ಗುಜ್ಜಾರ್ ಹಿಂಸಾಚಾರ: ಗೋಲಿಬಾರಿಗೆ 5 ಬಲಿ
ಗುಜರಾತ್ ವಿವಿ ಉಪನ್ಯಾಸಕನ ವಿರುದ್ಧ ಲೈಂಗಿಕ ಕಿರುಕುಳ ದೂರು
ಪ್ರಧಾನಿಯನ್ನು ಹಾಡಿ ಹೊಗಳಿದ ಸೋನಿಯಾ
ರಾಮಸೇತು: ಜೂ.15ಕ್ಕೆ ಸಾಧುಗಳ ಸಭೆ