ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರುಷಿ ಪ್ರಕರಣ: ಆರೋಪ ತಳ್ಳಿ ಹಾಕಿದ ದುರ್ರಾನಿ  Search similar articles
ನೋಯ್ಡಾ: ತನ್ನ ಪುತ್ರಿ ಅರುಷಿ ಕೊಲೆಯ ಅರೋಪ ಹೊತ್ತಿರುವ ರಾಕೇಶ್ ತಲ್ವಾರ್‌ ಅನೈತಿಕ ಸಂಬಂಧ ಹೊಂದಿದ್ದಾರೆಂದು ಹೇಳಲಾಗಿರುವ ಅವರ ಸಹವೈದ್ಯೆ ಅನಿತಾ ದುರ್ರಾನಿ ಈ ಆರೋಪವನ್ನು ತಳ್ಳಿಹಾಕಿದ್ದು, ಇದು ಸೂಕ್ತವಲ್ಲ ಹಾಗೂ 'ಅಧಾರ ರಹಿತವಾದದ್ದು' ಎಂದು ತಳ್ಳಿಹಾಕಿದ್ದಾರಲ್ಲದೆ, ಎರಡು ಕುಟುಂಬಗಳೊಳಗೆ ಉತ್ತಮ ಸಂಬಂಧವಿದೆ ಎಂದು ಹೇಳಿದ್ದಾರೆ.

ತನ್ನ ಅನೈತಿಕ ಸಂಬಂಧದ ಕುರಿತು ಮಗಳಿಗೆ ತಿಳಿದಿದ್ದುದೇ ಮಗಳು ಹಾಗೂ ಮನೆಯ ಸೇವಕ ಹೇಮರಾಜ್‌ನ ಕೊಲೆಗೆ ಕಾರಣ ಎಂದು ನೋಯ್ಡಾ ಪೊಲೀಸರು ಹೇಳಿರುವ ಮರುದಿನದಂದೇ, ಅನಿತಾ ಹಾಗೂ ಆಕೆಯ ಪತಿ ಪ್ರಫುಲ್ ದುರ್ರನಿ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. "ಪೊಲೀಸರು ಹೇಳಿರುವ ವಿಚಾರ ಅತ್ಯಂತ ಆಘಾತಕಾರಿಯಾದುದು. ಎಲ್ಲವೂ ಸುಳ್ಳು. ಯಾವುದೂ ಸರಿಯಿಲ್ಲ. ಎಲ್ಲವಿಚಾರಗಳು ಆಧಾರರಹಿತವಾದದ್ದು" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಲ್ವಾರ್ ದಂಪತಿಗಳು ಹಾಗೂ ದುರ್ರಾನಿ ದಂಪತಿಗಳು ದಂತವೈದ್ಯರಾಗಿದ್ದು, ತಲ್ವಾರ್ ದಂಪತಿಗಳ ಚಿಕಿತ್ಸಾಲಯದಲ್ಲಿ ದುರ್ರಾನಿ ದಂಪತಿಗಳೂ ಕಾರ್ಯನಿರ್ವಹಿಸುತ್ತಿದ್ದರು. ನಾವೆಲ್ಲ ಒಂದು ಉತ್ತಮ ಅವಿಭಕ್ತ ಕುಟುಂಬದಂತೆ ಉತ್ತಮ ಸಂಬಂಧ ಹೊಂದಿದ್ದೇವೆ ಎಂಬುದಾಗಿ ಅವರು ಹೇಳಿದ್ದಾರೆ.

ಇದಲ್ಲದೆ, ತಮ್ಮನ್ನು ಪೊಲೀಸರು ತನಿಖೆ ಮಾಡಿಲ್ಲ ಮತ್ತು ಒಂದು ಸಾರಿಯೂ ಈ ಕುರಿತು ತಮ್ಮನ್ನು ಮಾತಾಡಿಸಿಲ್ಲ ಎಂದು ದುರ್ರಾನಿ ದಂಪತಿಗಳು ತಿಳಿಸಿದರು.
ಮತ್ತಷ್ಟು
ಒಕ್ಕೂಟ ತನಿಖಾ ಏಜೆನ್ಸಿ ಸ್ಥಾಪನೆ ಅಗತ್ಯ: ಜೈಸ್ವಾಲ್
ಸಾಲಮನ್ನಾಗೆ ಮಾರ್ಗದರ್ಶಿ ಸೂತ್ರ ಅಂಗೀಕಾರ
ಖಂಡಾಂತರ ಕ್ಷಿಪಣಿ ಪೃಥ್ವಿಯ ಯಶಸ್ವಿ ಪರೀಕ್ಷೆ
ನೋಯ್ಡಾ: ಅರುಷಿ ತಂದೆ ಬಂಧನ
ಗುಜ್ಜಾರ್ ಹಿಂಸಾಚಾರ: ಗೋಲಿಬಾರಿಗೆ 5 ಬಲಿ
ಗುಜರಾತ್ ವಿವಿ ಉಪನ್ಯಾಸಕನ ವಿರುದ್ಧ ಲೈಂಗಿಕ ಕಿರುಕುಳ ದೂರು