ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜ್ಜಾರ್: ಅನಿರ್ದಿಷ್ಟಾವಧಿ ಮುಷ್ಕರದ ಬೆದರಿಕೆ  Search similar articles
ಜೈಪುರ: ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂದು ಕೋರಿ ಗುಜ್ಜಾರ್ ಜನಾಂಗದವರು ನಡೆಸುತ್ತಿರುವ ಪ್ರತಿಭಟನೆ ತೀವ್ರವಾಗಿದ್ದು, ತಮ್ಮ ಬೇಡಿಕೆ ಈಡೇರುವ ತನಕ ಅನಿರ್ದಿಷ್ಟಾವಧಿ ಮುಷ್ಕರ ಹೂಡುವ ಬೆದರಿಕೆ ಹಾಕಿದ್ದಾರೆ. ಶನಿವಾರ ನಡೆಸಿದ್ದ ಮುಷ್ಕರದ ವೇಳೆ ಉಂಟಾದ ಹಿಂಸಾಚಾರ ತಡೆಗಟ್ಟಲು ಪೊಲೀಸರು ಗೋಲಿಬಾರ್ ನಡೆಸಿದ್ದು 15 ಮಂದಿ ಸಾವನ್ನಪ್ಪಿದ್ದಾರೆ.

ಗುಜ್ಜಾರ್‌ಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ರಾಜ್ಯಸರಕಾರದ ಶಿಫಾರಸ್ಸು ಪತ್ರದ ಹೊರತಾಗಿ ಇನ್ಯಾವುದಕ್ಕೂ ತಾವು ಮಣಿಯೆವು ಎಂದು ಗುರ್ಜಾರ್ ಅರ್ಕಶಾನ್ ಸಂಘರ್ಷ ಸಮಿತಿಯ ಸಂಚಾಲಕ ಕಿರೊರಿ ಭೈಂಸ್ಲಾ ಹೇಳಿದ್ದಾರೆ.

"ನಮ್ಮ ಬೇಡಿಕೆಯನ್ನು ರಾಜ್ಯ ಸರಕಾರ ಈಡೇರಿಸುವ ತನಕ ನಾವು ಅನಿರ್ದಿಷ್ಟ ಮುಷ್ಕರ ಹೂಡಲಿದ್ದೇವೆ" ಎಂದು ಕಿರೋರಿ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಗುಜ್ಜಾರ್ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರಕಾರ ಘೋಷಿಸಿರುವ 282 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜನ್ನು ಶಿಫಾರಸ್ಸು ಪತ್ರದ ಬದಲಾಗಿ ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ಇದು ಸಮುದಾಯದ ಅಭಿವೃದ್ಧಿಗೆ ಸಾಕಾಗುವುದೂ ಇಲ್ಲ ಎಂದು ಅವರು ಹೇಳಿದ್ದಾರೆ.

ಒಂದೊಮ್ಮೆ ಈ ಪ್ಯಾಕೇಜನ್ನು ವಿಸ್ತರಿಸಿದರೆ ಸ್ವೀಕರಿಸುವಿರಾ ಎಂದು ಕೇಳಲಾಗಿರುವ ಪ್ರಶ್ನೆಗೆ ಉತ್ತರಿಸಿದ ಅವರು, "ಇಲ್ಲ, ಸಾಧ್ಯವೇ ಇಲ್ಲ" ಎಂದು ಉತ್ತರಿಸಿದ್ದಾರೆ.

ಶುಕ್ರವಾರ ನಡೆಸಿದ್ದ ಮುಷ್ಕರದ ವೇಳೆ ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದ ಪರಿಣಾಮ ಪೊಲೀಸರು ಗೋಲಿಬಾರ್ ನಡೆಸಿದ್ದು, ಪೊಲೀಸ್ ಒಬ್ಬ ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದಾರೆ.

ನಿನ್ನೆಯ ರೈಲ್‌ರೋಕೋ ಚಳುವಳಿಗೆ ಕರೆ ನೀಡಿರುವ ಭೈಂಸ್ಲಾ ಹಾಗೂ ಆತನ ಇತರ ಐವರು ಸಹಚರರ ವಿರುದ್ಧ ಕರೌಲಿ ಜಿಲ್ಲಾಡಳಿತ ಬಂಧನ ವಾರಂಟ್ ಹೊರಡಿಸಿದೆ. ಆದರೆ ಪ್ರತಿಭಟನಾಕಾರರು ರೈಲ್ವೇಹಳಿಗೆ ಹಾನಿಯುಂಟುಮಾಡಿದ್ದಾರೆ ಎಂಬ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ.

ಸೇನಾ ನಿಯೋಜನೆ
ಜಿಲ್ಲೆಯ ಹಿಂಸಾ ಜರ್ಜರಿತ ಬಯಾನ ಪಟ್ಟಣದಲ್ಲಿ ಶನಿವಾರ ಸೇನೆ ನಿಯೋಜಿಸಲಾಗಿದೆ. ಇಲ್ಲಿ ಗುಜ್ಜಾರ್‌ಗಳು ಹಾಗೂ ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು.
ಬಯನ ಪಟ್ಟಣ ಹಾಗೂ ಸಮೀಪದ ಗ್ರಾಮಗಳಾದ ಫಿಲ್ಪುರ, ಧುಮರಿಯ, ಬರ್ವರಿಯಗಳಲ್ಲಿ ಸುಮಾರು 800 ಪಡೆಗಳನ್ನು ನಿಯೋಜಿಸಿರುವುದಾಗಿ ಭಾರತ್‌ಪುರ ಜಿಲ್ಲಾಧಿಕಾರಿ ಟಿ.ರವಿಕಾಂತ್ ಹೇಳಿದ್ದಾರೆ.
ಮತ್ತಷ್ಟು
ಅರುಷಿ ಪ್ರಕರಣ: ಆರೋಪ ತಳ್ಳಿ ಹಾಕಿದ ದುರ್ರಾನಿ
ಒಕ್ಕೂಟ ತನಿಖಾ ಏಜೆನ್ಸಿ ಸ್ಥಾಪನೆ ಅಗತ್ಯ: ಜೈಸ್ವಾಲ್
ಸಾಲಮನ್ನಾಗೆ ಮಾರ್ಗದರ್ಶಿ ಸೂತ್ರ ಅಂಗೀಕಾರ
ಖಂಡಾಂತರ ಕ್ಷಿಪಣಿ ಪೃಥ್ವಿಯ ಯಶಸ್ವಿ ಪರೀಕ್ಷೆ
ನೋಯ್ಡಾ: ಅರುಷಿ ತಂದೆ ಬಂಧನ
ಗುಜ್ಜಾರ್ ಹಿಂಸಾಚಾರ: ಗೋಲಿಬಾರಿಗೆ 5 ಬಲಿ