ತಮ್ಮ ವಿವಾಹದ ವೇಳೆ ಉಡುಗೋರೆಯಾಗಿ ಬಂದ ಮೊತ್ತವನ್ನು ತಲೆಸಿಮ್ಯಾ ಕಾಯಿಲೆಯಿಂದ ಬಳಲುವ ಬಾಲಕನೊಬ್ಬನಿಗೆ ನೀಡಿದ ಇಲ್ಲಿನ ನವದಂಪತಿಗಳು ಅಪೂರ್ವ ಆದರ್ಶ ಮೆರೆದಿದ್ದಾರೆ.
24 ಪರಗಣ ಜಿಲ್ಲೆಯ ಸೈಂಪಾಲ ಎಂಬಲ್ಲಿನ ಸಂಜಿತ್ ಮತ್ತು ರುಪ್ಸಾ ಸೇನ್ ಶನಿವಾರವಷ್ಟೆ ತಮ್ಮ ದಾಂಪತ್ಯ ಜೀವನಕ್ಕೆ ಅಡಿ ಇರಿಸಿದ್ದಾರೆ. ಈ ದಂಪತಿಗಳು ತಮ್ಮ ಮದುವೆಯ ವೇಳೆಗೆ ಸಂಗ್ರಹಿತವಾದ 12 ಸಾವಿರ ರೂಪಾಯಿಯನ್ನು ಆರು ವರ್ಷದ ಬಾಲಕನ ಚಿಕಿತ್ಸೆಗೆ ನೆರವಾಗಿ ನೀಡಿದ್ದಾರೆ.
"ನಾವು ನಮ್ಮ ಸಂಬಂಧಿಗಳು ಮತ್ತು ಸ್ನೇಹಿತರಿಗೆ ಉಡುಗೋರೆಯಾಗಿ ವಸ್ತುವಿನ ಬದಲಿಗೆ ಹಣವನ್ನೇ ನೀಡುವಂತೆ ವಿನಂತಿಸಿಕೊಂಡಿದ್ದೆವು. ಮದುವೆಯ ಔತಣಕೂಟದಲ್ಲಿ ಹೀಗೆ ಒಟ್ಟಾರೆ 12 ಸಾವಿರ ರೂಪಾಯಿ ಸಂಗ್ರಹವಾಗಿತ್ತು ಇದನ್ನು ನಾವು ಆರು ವರ್ಷದ ಬಾಲಕ ಆಯಶ್ ಮುಖರ್ಜಿಗೆ ನೀಡಿದೆವು" ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಪತ್ರಿಕೆಯೊಂದರಲ್ಲಿ ಈ ಬಾಲಕನ ಆರೋಗ್ಯದ ದುಸ್ಥಿತಿಯ ಬಗ್ಗೆ ಪ್ರಕಟವಾಗುತ್ತಿದ್ದ ಪುನರಪಿ ವರದಿಯಿಂದ ಸ್ಫೂರ್ತಿಗೊಂಡು, ಈ ಮೂಲಕ ಆ ಬಾಲಕನಿಗೆ ನೆರವಾಗಲು ನಿರ್ಧರಿಸಿದ್ದರು.
|