ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಜಯಭೇರಿ, ಕಾಂಗ್ರೆಸ್ ಆತ್ಮಶೋಧ, ಜೆಡಿಎಸ್ ಹತಾಶ ನಗು  Search similar articles
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಬಿಜೆಪಿ, ವಿಜಯದ ನಗಾರಿ ಮೊಳಗಿಸಿದ್ದು, ಸರಕಾರ ರಚನೆಗೆ ಆಹ್ವಾನ ನೀಡುವಂತೆ ರಾಜ್ಯಪಾಲರನ್ನು ಒತ್ತಾಯಿಸಿದೆ.

ಮತದಾರನ ತೀರ್ಪು ಕಾಂಗ್ರೆಸ್ ವಿರುದ್ಧವಾಗಿದೆ, ಜೆಡಿಎಸ್‌ಗೆ ಜನ ನಿರ್ಣಾಯಕ ಪಾಠ ಕಲಿಸಿದ್ದಾರೆ ಮತ್ತು ಬಿಜೆಪಿಯ ಪರವಾಗಿ, ಅಭಿವೃದ್ಧಿ ಪರವಾಗಿ ಜನತೆ ತೀರ್ಪು ನೀಡಿದ್ದಾರೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ರಾಜ್ಯಪಾಲರನ್ನು ಮೊದಲು ಬಿಜೆಪಿಯನ್ನೇ ಆಹ್ವಾನಿಸಬೇಕು. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವನ್ನು ಆಹ್ವಾನಿಸಿದಲ್ಲಿ ಜನಮತಕ್ಕೆ ಅಗೌರವ ಸಲ್ಲಿಸಿದಂತಾಗುತ್ತದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಬಿಜೆಪಿ ಮುಖ್ಯ ಕಚೇರಿಯಲ್ಲಿ ಅಕ್ಷರಶಃ ಹಬ್ಬದ ವಾತಾವರಣವಿತ್ತು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುವ ದೃಶ್ಯ ಸಾಮಾನ್ಯವಾಗಿತ್ತು.


ಕಾಂಗ್ರೆಸ್ ಸೋಲಿಗೆ ನೈತಿಕ ಹೊಣೆ ಹೊತ್ತ ಕೃಷ್ಣ

ಪ್ರತಿಕೂಲ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಮಂಕು ಆವರಿಸಿದೆ. ಮಹಾರಾಷ್ಟ್ರ ರಾಜ್ಯಪಾಲ ಹುದ್ದೆ ತೊರೆದು ಕರ್ನಾಟಕದಲ್ಲಿ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸಲೆಂದು ಮರಳಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ತಮ್ಮ ಪಕ್ಷದ ಹಿನ್ನಡೆಗೆ ನೈತಿಕ ಹೊಣೆ ಹೊತ್ತುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ಸಿಎನ್ಎನ್-ಐಬಿಎನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜಾತ್ಯತೀತ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಿಭಜನೆಯಾಗಿದ್ದೇ ಪಕ್ಷದ ಸೋಲಿಗೆ ಕಾರಣ ಎಂದಿದ್ದಾರೆ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಚೌಹಾಣ್ ಪ್ರತಿಕ್ರಿಯಿಸಿದ್ದಾರೆ.


ಕಿಂಗ್ ಮೇಕರ್ ಆಗದ ಜೆಡಿಎಸ್

ಫಲಿತಾಂಶದ ಒಟ್ಟಾರೆ ಪ್ರತಿಕೂಲ ಫಲ ಅನುಭವಿಸಬೇಕಾಗಿರುವುದು ಜೆಡಿಎಸ್‌ಗೆ. ಅದು ಹೊಡೆತ ರೂಪದಲ್ಲೇ ಎಗರಿದೆ. 2004ರಂತೆ ಅತಂತ್ರ ತೀರ್ಪು ಬಂದು ಮತ್ತೊಮ್ಮೆ ಕಿಂಗ್ ಮೇಕರ್ ಆಗುವ ಹುನ್ನಾರದಲ್ಲಿದ್ದ ಜೆಡಿಎಸ್ ಈಗ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಕೈಕೈ ಹಿಸುಕಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷವು ಜೆಡಿಎಸ್ ಜತೆ ಕೈಜೋಡಿಸಿ ಸರಕಾರ ರಚಿಸುವ ಬಗ್ಗೆ ಮಾತನಾಡುತ್ತಿದ್ದರೆ, ಜೆಡಿಎಸ್ ಮುಖಂಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂತಾದವರು, ಅದರೊಂದಿಗೆ ಮೈತ್ರಿ ಇಲ್ಲ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ.
ಮತ್ತಷ್ಟು
ತಲೆಸಿಮ್ಯಾ ರೋಗಿಯ ಸಹಾಯಕ್ಕೆ ಮುಂದಾದ ನವದಂಪತಿ
ಲೋಕಸಭೆ ಚುನಾವಣೆ ನಿರ್ಧರಿಸಲಿರುವ ರಾಜ್ಯ ಫಲಿತಾಂಶ
ಹೊಗೇನಕಲ್ ಮುಂದುವರಿಸಲು ಕರುಣಾ ಸೂಚನೆ
ಗುಜ್ಜಾರ್: ಅನಿರ್ದಿಷ್ಟಾವಧಿ ಮುಷ್ಕರದ ಬೆದರಿಕೆ
ಅರುಷಿ ಪ್ರಕರಣ: ಆರೋಪ ತಳ್ಳಿ ಹಾಕಿದ ದುರ್ರಾನಿ
ಒಕ್ಕೂಟ ತನಿಖಾ ಏಜೆನ್ಸಿ ಸ್ಥಾಪನೆ ಅಗತ್ಯ: ಜೈಸ್ವಾಲ್