ಹಿಂಸಾನಿರತ ಪ್ರತಿಭಟನಾಕಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೇ ಸಿಂಧ್ಯಾ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ, ಸರಕಾರ ಮತ್ತು ಗುಜ್ಜಾರ್ ಸಮುದಾಯದ ನಡುವಿನ ಹಗ್ಗಜಗ್ಗಾಟ ತೀವ್ರಗೊಂಡಿದ್ದು, ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಗುಜ್ಜಾರ್ ಸಮುದಾಯಕ್ಕೆ ಪರಿಶಿಷ್ಟಜಾತಿಯ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಹೂಡಿರುವ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಗುಜ್ಜಾರ್ ನಾಯಕ ಕಿರೋರಿ ಸಿಂಗ್ ಭೈಂಸ್ಲಾ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗುಜ್ಜಾರ್ ಸಮುದಾಯಕ್ಕೆ ಪರಿಶಿಷ್ಟಜಾತಿಯ ಸ್ಥಾನಮಾನದ ಶಿಫಾರಸ್ಸಿನ ಪತ್ರವನ್ನು ಸರಕಾರ ನೀಡದಿದ್ದರೆ, ಸರಕಾರದೊಂದಿಗೆ ಮಾತುಕತೆಯನ್ನು ಭೈಂಸ್ಲಾ ತಳ್ಳಿಹಾಕಿದ್ದಾರೆ.
ಈ ವಿಚಾರದ ಕುರಿತು ಸರಕಾರ ಗಂಭೀರವಾಗಿಲ್ಲ ಎಂದು ಹೇಳಿರುವ ಭೈಂಸ್ಲಾ, ಬಯನಾಗೆ ಮುಖ್ಯಮಂತ್ರಿಯ ಭೇಟಿ ಒಂದು ನಾಟಕವಷ್ಟೆ ಎಂದು ಹೇಳಿದ್ದಾರೆ.
ಗುಜ್ಜಾರರು ಪ್ರತಿಭಟನೆ ನಡೆಸಿದ ವೇಳೆ ನಡೆದ ಗೋಲಿಬಾರ್‌ನಲ್ಲಿ 38ಕ್ಕೂ ಅಧಿಕ ಮಂದಿ ಹತರಾಗಿದ್ದಾರೆ. ಶನಿವಾರದಂದು ಇವರು ಗೋಲಿಬಾರಿನಲ್ಲಿ ಸಾವನ್ನಪ್ಪಿದವರ ಮೃತದೇಹವನ್ನು ಇರಿಸಿಕೊಂಡು ಪ್ರತಿಭಟನೆ ನಡೆಸಿದ್ದರು.
|