ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿರುವ ಕಾಂಗ್ರೆಸ್, ಲೋಕಸಭಾ ಉಪಚುನಾವಣೆಗಳಲ್ಲೂ ಹಿನ್ನಡೆ ಸಾಧಿಸಿದೆ. ಹರ್ಯಾಣದ ಎರಡು ವಿಧಾನ ಸಭಾ ಕ್ಷೇತ್ರವನ್ನು ಮಾತ್ರ ಗೆದ್ದುಕೊಂಡಿದೆ.
ಹಿಮಾಚಲ ಪ್ರದೇಶದ ಹಮರಿಪುರದಲ್ಲಿ ಬಿಜೆಪಿ ಹಾಗೂ, ಮಹಾರಾಷ್ಟ್ರದ ಥಾನೆ ಕ್ಷೇತ್ರದಲ್ಲಿ ಶಿವಸೇನೆ ಗೆದ್ದಿದೆ. ಮೇಘಾಲಯದ ತುರಾ ಲೋಕಸಭಾ ಕ್ಷೇತ್ರದಲ್ಲಿ ಎನ್‌ಸಿಪಿಯ ಅಗಾತ ಕೆ ಸಂಗ್ಮಾ ಗೆದ್ದಿದ್ದಾರೆ. 27ರ ಹರೆಯದ ಅಗಾತ, ದೆಹಲಿಯಲ್ಲಿ ವಕೀಲೆಯಾಗಿದ್ದು, ಕಾಂಗ್ರೆಸ್‌ನ ಜೆನಿತ್ ಸಂಗ್ಮಾ ಅವರನ್ನು 99,855 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಹಿಮಾಚಲ ಪ್ರದೇಶದ ಹಮರಿಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಪುತ್ರ ಅನುರಾಗ್ ಠಾಕುರ್ 1,74,666 ಮತಗಳಿಂದ ಗೆದ್ದಿದ್ದಾರೆ.
ಹರ್ಯಾಣ ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ ಇನ್ನೊಂದು ಸ್ಥಾನ ಹೊಸದಾಗಿ ರೂಪಿಸಲಾಗಿರುವ ಹರ್ಯಾಣ ಜನಹಿತ ಕಾಂಗ್ರೆಸ್ ಪಾಲಾಗಿದೆ.
ಪಂಜಾಬಿನ ಅಮೃತ ಸರದಲ್ಲಿ ನಡೆದ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳ ಗೆದ್ದಿದೆ.
|