ಜೈಪುರ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಮುಸ್ಲಿಂ ಧರ್ಮಗುರು ಓರ್ವನನ್ನು ಭಾರತ್‌ಪುರದಲ್ಲಿ ಬಂಧಿಸಿದ್ದಾರೆ ಎಂಬುದಾಗಿ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಭಾರತ್‌ಪುರದ ಶಹರ್ ಖಾಜಿಯಾಗಿರುವ ಮೊಹಮ್ಮದ್ ಇಲ್ಯಾಸ್ ಎರಡು ದಿನಗಳ ಹಿಂದೆ ಬಂಧನಕ್ಕೀಡಾಗಿದ್ದು, ಆತನನ್ನು ಜೈಪುರಕ್ಕೆ ಕರೆತರಲಾಗಿದೆ ಎಂದು ವರದಿ ತಿಳಿಸಿದೆ.
ಶೆಹರ್ ಖಾಜಿ ವಾಸ್ತವ್ಯದ ಜಾಗಕ್ಕೆ ದಾಳಿ ನಡೆಸಿರುವ ಪೊಲೀಸರು ಮದ್ರಸಾ ಕಂಪ್ಯೂಟರ್ ಅನ್ನು ಮುಟ್ಟಗೋಲು ಹಾಕಿಕೊಂಡಿದ್ದಾರೆ. ಇಲ್ಯಾಸ್ ಪತ್ನಿಯ ಮೊಬೈಲ್ ಫೋನ್ ಅನ್ನೂ ವಶಪಡಿಸಿಕೊಳ್ಳಲಾಗಿದೆ.
ಜೈಪುರದಲ್ಲಿ ಮೇ 13ರಂದು ನಡೆಸಲಾಗಿರುವ ಸರಣಿ ಸ್ಫೋಟದಲ್ಲಿ 66 ಮಂದಿ ಸಾವಿಗೀಡಾಗಿದ್ದಾರೆ. ಅಷ್ಟೊಂದು ಪ್ರಚಾರದಲ್ಲಿಲ್ಲದ ಇಂಡಿಯನ್ ಮುಜಾಹಿದ್ದೀನ್ ಸ್ಫೋಟದ ಜವಾಬ್ದಾರಿ ವಹಿಸಿಕೊಂಡಿತ್ತು.
|