ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಸ್ಥಾನ: ಗುಜ್ಜಾರ್ ವಿರುದ್ಧ ಬಿಗಿನಿಲುವು  Search similar articles
ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಒತ್ತಾಯಿಸಿ ಗುಜ್ಜಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ರೈಲ್ವೇ ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿವೆ. ಪ್ರತಿಭಟನೆಯಿಂದ ಮಡಿದವರ ಸಂಖ್ಯೆ 37ಕ್ಕೇರಿದೆ. ಏತನ್ಮಧ್ಯೆ ಬಾಲಕನೊಬ್ಬ ತನ್ನ ಕಣ್ಣೊಂದನ್ನು ಕಳೆದುಕೊಂಡಿದ್ದಾನೆ.

ಪ್ರತಿಭಟನೆಯ ಕೇಂದ್ರಸ್ಥಳವಾಗಿರುವ ಬಯಾನದಿಂದ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಹಿರಿಯ ನಾಯಕ ಅಮರ್ ಸಿಂಗ್ ಅವರನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರು ಮುಷ್ಕರದಲ್ಲಿ ಪಾಲ್ಗೊಳ್ಳಲು ಭಾರತ್‌ಪುರತ್ತ ತೆರಳುತ್ತಿದ್ದಾಗ ಬಯಾನದ ಹೊರವಲಯದಲ್ಲಿ ಅವರನ್ನು ಬಂಧಿಸಲಾಗಿದೆ.

ಹೆಚ್ಚುವರಿ ಸೇನಾ ಸಿಬ್ಬಂದಿ ನಿಯೋಜನೆ
ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ಸ್ಥಳದಲ್ಲಿ ನೇಮಿಸಲಾಗಿದ್ದು, ಪೀಲ್‌ಪುರ ಸುತ್ತಮುತ್ತ ಜನಸಂಚಾರವನ್ನು ನಿರ್ಬಂಧಿಸಲು ಸರಕಾರ ಯೋಚಿಸುತ್ತಿದೆ.

ಸರಕಾರವು ಬಯಾನದಲ್ಲಿ ಮೊಬೈಲ್ ಸೇರಿದಂತೆ ಎಲ್ಲಾ ಸಂಪರ್ಕ ಜಾಲವನ್ನು ಜಾಮ್ ಮಾಡಿದೆ. ಮುಖ್ಯಮಂತ್ರಿ ವಸುಂಧರಾ ರಾಜೆ ಅವರೊಂದಿಗೆ ಮಾತುಕತೆಗೆ ಗುಜ್ಜಾರ್ ನಾಯಕರು ನಿರಾಕರಿಸಿದ್ದಾರೆ. ಪ್ರತಿಭಟನಾ ನಿರತರೊಂದಿಗೆ ಗೂಂಡಾಗಳು ನುಸುಳಿಕೊಂಡು ಕಾನೂನನ್ನು ಕೈಗೆತ್ತಿಕೊಂಡಲ್ಲಿ "ನಮಗಿಂತ ಕೆಟ್ಟವರು ಬೇರೆ ಯೂರೂ ಇರಲಾರರು" ಎಂಬುದಾಗಿ ಮುಖ್ಯ ಮಂತ್ರಿಯವರು ಖಾರವಾದ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು
ಜೈಪುರ ಸ್ಫೋಟ: ಮುಸ್ಲಿಂ ಧರ್ಮಗುರು ಬಂಧನ
ಉಪಚುನಾವಣೆಗಳಲ್ಲೂ ಕಾಂಗ್ರೆಸ್‌ಗೆ ಮುಖಭಂಗ
ಪಟ್ಟುಬಿಡದ ಗುಜ್ಜಾರರು: ಮುಂದುವರಿದ ಪ್ರತಿಭಟನೆ
ಬಿಜೆಪಿ ಜಯಭೇರಿ, ಕಾಂಗ್ರೆಸ್ ಆತ್ಮಶೋಧ, ಜೆಡಿಎಸ್ ಹತಾಶ ನಗು
ತಲೆಸಿಮ್ಯಾ ರೋಗಿಯ ಸಹಾಯಕ್ಕೆ ಮುಂದಾದ ನವದಂಪತಿ
ಲೋಕಸಭೆ ಚುನಾವಣೆ ನಿರ್ಧರಿಸಲಿರುವ ರಾಜ್ಯ ಫಲಿತಾಂಶ